ಇಮಾಮ್, ಮೌಝನ್ ರ ದಾಖಲೆಗಳನ್ನು ವಕ್ಫ್ ಕಚೇರಿಗೆ ಸಲ್ಲಿಸಲು ಸೂಚನೆ

Update: 2019-09-20 13:40 GMT

ಮಂಗಳೂರು,ಸೆ.20:ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯಿಂದ ಗೌರವಧನ ಪಡೆಯುತ್ತಿರುವ ಪೇಶ್ ಇಮಾಮ್ ಮತ್ತು ಮೌಝನ್ (ಮುಕ್ರಿ)ರು ದ.ಕ.ಜಿಲ್ಲೆಯ ವಕ್ಫ್ ನೋಂದಾಯಿತ ಮಸೀದಿಗಳಲ್ಲಿ ಹಾಲಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಆಯಾ ಮಸೀದಿಯ ಅಧ್ಯಕ್ಷರು ಅಥವಾ ಕಾರ್ಯದರ್ಶಿಗಳು ಸದ್ರಿ ಇಮಾಮ್/ಮೌಝನ್ ಕುರಿತಾದ ದೃಢೀಕರಣ ಪತ್ರ, ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಯ ಝೆರಾಕ್ಸ್ (ಇಂದಿನವರೆಗೆ ಅಪ್‌ಡೇಟ್ ಆಗಿರುವ ಬಗ್ಗೆ)ದ್ವಿಪ್ರತಿಯನ್ನು ಜಿಲ್ಲಾ ವಕ್ಫ್ ಕಚೇರಿಗೆ ಸೆ.25ರೊಳಗೆ ಸಲ್ಲಿಸಬೇಕು ಎಂದು ಜಿಲ್ಲಾ ವಕ್ಫ್ ಅಧಿಕಾರಿಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News