ದಿಡುಪೆ: 'ನೆರೆ ಸಂತ್ರಸ್ತರೆಡೆಗೆ ನಮ್ಮ ನಡಿಗೆ' ಏಕದಿನ ಶಿಬಿರ

Update: 2019-09-20 14:20 GMT

ಬಂಟ್ವಾಳ, ಸೆ. 20: ವಾಮದಪದವು ಸರಕಾರಿ ಪ್ರಥಮ ದರ್ಜೆ ಕಾಲೇಜು ಇದರ ರಾಷ್ಟ್ರೀಯ ಸೆವಾ ಯೋಜನೆಯ ಏಕದಿನ ಶಿಬಿರವನ್ನು ದಿಡುಪೆಯಪುಟ್ಟ ಎಂ.ಕೆ ಮಲ್ಲದಪಾಲು ಮಲವಂತಿಗೆ ಇವರ ನೆರೆ ಪೀಡಿತ ಪ್ರದೇಶದಲ್ಲಿ ನಡೆಸಲಾಯಿತು.

ನೆರೆ ಸಂತ್ರಸ್ತರೆಡೆಗೆ ನಮ್ಮ ನಡಿಗೆ ಎಂಬ ಘೋಷವಾಕ್ಯದೊಂದಿಗೆ 50 ಮಂದಿ ಎನ್ನೆಸ್ಸೆಸ್ ಸೇವಕರು ಒಂದು ದಿನದ ಶ್ರಮದಾನವನ್ನು ನಡೆಸಿಕೊಟ್ಟರು. ರಾಷ್ಟ್ರೀಯ ಸೆವಾ ಯೋಜನಾಧಿಕಾರಿಗಳಾದ ಪ್ರೊ. ರೋನಾಲ್ಡ್ ಪ್ರವೀಣ್ ಕೊರೆಯ, ಡಾ. ಮೇರಿ ಎಂ.ಜೆ, ಪ್ರೊ.ಸುರೇಶ್ ಆಂಗ್ಲ ಭಾಷಾ ಉಪನ್ಯಾಸಕರು, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ಸ್ಥಳೀಯರಾದ ಉಮೇಶ್, ದಿನೇಶ್ ಗೌಡ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಲವಂತಿಗೆ ದಿಡುಪೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News