ರಸ್ತೆಯಲ್ಲಿ ಕಸ ಎಸೆದವನಿಂದಲೇ ಕಸ ವಿಲೇವಾರಿ ಮಾಡಿಸಿದ ಪುರಸಭೆ ಅಧಿಕಾರಿ

Update: 2019-09-20 14:49 GMT

ಭಟ್ಕಳ: ತಾಲೂಕಿನ ಕಾರ್ ಸ್ಟ್ರೀಟ್ ನ ಕಾರ್ಪೊರೇಶನ್ ಬ್ಯಾಂಕ್ ಮುಂಭಾಗದಲ್ಲಿ ರಾತ್ರಿ ಕಸ ಎಸೆದು ಹೋದ ಆಟೋ ಚಾಲಕನಿಂದಲೇ ಪುರಸಭೆ ಕಸವನ್ನು ಸ್ವಚ್ಚಪಡಿಸಿ ಆಟೋದಲ್ಲೇ ತುಂಬಿ ಕಳುಹಿಸಿದ ಘಟನೆ ನಡೆದಿದೆ.

ರಾತ್ರಿ 7 ಗಂಟೆ ಸುಮಾರಿಗೆ ಭಟ್ಕಳ ಕಾರ್ಪೊರೇಶನ ಬ್ಯಾಂಕ್ ಮುಂಭಾಗದಲ್ಲಿ ಆಟೋ ಚಾಲಕನೋರ್ವ ಸಾರ್ವಜನಿಕ ಸ್ಥಳದಲ್ಲಿ ಆಟೋದಲ್ಲಿ ಬಂದು ಕಸ ಎಸೆದು ಹೋಗಿದ್ದು, ಇದನ್ನು ಗಮನಿಸಿದ ಸಾರ್ವಜನಿಕರೊಬ್ಬರು ಪುರಸಭೆಯಗೆ ಕರೆ ಮಾಡಿ ದೂರು ನೀಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬಂದ ಪುರಸಭೆ ಅಧಿಕಾರಿಗಳು ಅಲ್ಲೇ ಪಕ್ಕದಲ್ಲಿರುವ ಅಂಗಡಿಯ ಸಿ.ಸಿ.ಟಿ.ವಿ ಮೂಲಕ ಕಸ ಎಸೆದು ಹೋದ ಆಟೋ ಚಾಲಕನನ್ನು ಪತ್ತೆ ಹಚ್ಚಿ ಆತನಿಗೆ ಸ್ಥಳಕ್ಕೆ ಕರೆಸಿಕೊಂಡು ಪುರಸಭೆ ಅಧಿಕಾರಿಗಳು ಆತನ ಕೈಯಿಂದಲೇ ತಾನು ಹಾಕಿರುವ ಕಸವನ್ನು ಸ್ವಚ್ಚ ಪಡಿಸಿ ಆತನ ಆಟೋದಲ್ಲಿಯೇ ತುಂಬಿ ಕಳುಹಿಸಿರುವ ಘಟನೆ ನಡೆದಿದೆ.

ಈ ಸ್ಥಳದಲ್ಲಿ ಪದೇ ಪದೇ ಕಸ ಹಾಕುತ್ತಿರುವ ಬಗ್ಗೆ ಸಾರ್ವಜನಿಕರು ಜಿಲ್ಲಾಧಿಕಾರಿಗೆ ದೂರು ನೀಡಿದ್ದು ನಮ್ಮ ಗಮನಕ್ಕೆ ಬಂದಿದೆ. ಈ ಸ್ಥಳದಲ್ಲಿ ರಾತ್ರಿ ಸಾರ್ವಜನಿಕರೊಬ್ಬರು ಕಾಸ ಹಾಕಿರುದನ್ನು ದೂರವಾಣಿಯ ಮೂಲಕ ದೂರು ನೀಡಿದ್ದು .ನಾವು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿ ಆಟೋ ಚಾಲಕನಿಂದಲೇ ಕಸವನ್ನು ಸ್ವಚ್ಚ ಪಡಿಸಿ ಕಸವನ್ನು ಆತನ ಆಟೋದಲ್ಲಿಯೇ ತುಂಬಿ ಕಳುಹಿಸಲಾಗಿದೆ. ಮುಂದಿನ ದಿನಗಳಲ್ಲಿ ಯಾರಾದರೂ ಕಸ ಹಾಕಿರುವುದು ನಮ್ಮ ಗಮನಕ್ಕೆ ಬಂದರೆ ಅವರ ಕೈಯಿಂದಲೇ ಕಸದ ಸ್ವಚ್ಛತೆ ಮಾಡಿಸಿ ಅಪಾರ ದಂಡ ವಿಧಿಸಲಾಗುವುದು ಎಂದು ಪುರಸಭೆ ಆರೋಗ್ಯ ಅಧಿಕಾರಿ ಸುಜಯಾ ಸೋಮನ್ ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News