ಉಡುಪಿ: ಅಡಿಕೆಯಲ್ಲಿ ಬೇರು ಹುಳದ ಸಮಗ್ರ ಪೀಡೆ ನಿರ್ವಹಣೆಗೆ ಪ್ರಾತ್ಯಕ್ಷಿಕೆ

Update: 2019-09-20 14:54 GMT

ಉಡುಪಿ, ಸೆ.20: ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರ ಮತ್ತು ಆತ್ಮ ಯೋಜನೆ ಅಜೆಕಾರು ಇವರ ವತಿಯಿಂದ ಅಜೆಕಾರಿನಲ್ಲಿ ಅಡಿಕೆಯಲ್ಲಿ ಬೇರು ಹುಳದ ಸಮಗ್ರ ಪೀಡೆ ನಿರ್ವಹಣೆಗೆ ಪ್ರಾತ್ಯಕ್ಷಿಕೆ ಇತ್ತೀಚೆಗೆ ನಡೆಯಿತು.

ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಬಿ. ಧನಂಜಯ, ಅಡಿಕೆ ಬೇರು ಹುಳದ ಹಾನಿ, ಅದರಿಂದಾಗುವ ನಷ್ಟದ ಬಗ್ಗೆ ರೈತರಿಗೆ ತಿಳಿಸಿ, ಸಮಗ್ರ ಪೀಡೆ ನಿರ್ವಹಣೆಯ ಅನಿಾರ್ಯತೆಯ ಬಗ್ಗೆ ವಿವರಣೆ ನೀಡಿದರು.

ಕೀಟಶಾಸ್ತ್ರಜ್ಞ ಡಾ. ಸಚಿನ್ ಯು.ಎಸ್, ಬೇರು ಹುಳದ ಸಂಪೂರ್ಣ ಮಾಹಿತಿಯೊಂದಿಗೆ ಅದರ ಜೀವನ ಚಕ್ರ, ಹಾನಿಯ ಪ್ರಮಾಣ ಮತ್ತು ಸಮಗ್ರ ಪೀಡೆ ನಿರ್ವಹಣೆಯ ವಿಧಾನಗಳ ಬಗ್ಗೆ ರೈತರಿಗೆ ವಿವರಣೆ ನೀಡಿದರು. ಕಾರ್ಯಕ್ರಮದಲ್ಲಿ ಕೇಂದ್ರದ ವತಿಯಿಂದ ಆಯ್ದ ರೈತರಿಗೆ, ಬೇರು ಹುಳದ ಹತೋಟಿಯ ಪರಿಕರಗಳನ್ನು ವಿತರಿಸಿ, ಪ್ರಾತ್ಯಕ್ಷಿಕೆಯನ್ನು ತೋರಿಸಲಾಯಿತು.

ರೈತ ಮುಖಂಡ ಧನಂಜಯ ಜೈನ್‌ಕಾರ್ಯಕ್ರಮ ಉದ್ಘಾಟಿಸಿದರು. ಸುಂದರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಅಶ್ವಥ್ ನಾರಾಯಣ್ ಪ್ರಭು ಉಪಸ್ಥಿತರಿದ್ದರು. ಕೃಷಿ ಅಧಿಕಾರಿ ಸಿದ್ದಪ್ಪ ತುಡುಬಿನ್ ಸ್ವಾಗತಿಸಿ, ಉಮಾಶ್ರೀ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News