ಅಯೋಧ್ಯೆ ಪ್ರಕರಣ: ಜಯ ಗಳಿಸಿದರೆ ಚಿನ್ನದ ರಾಮ ಮಂದಿರ ನಿರ್ಮಾಣ ಎಂದ ಸ್ವಾಮಿ ಚಕ್ರಪಾಣಿ

Update: 2019-09-20 15:32 GMT
ಫೊಟೋ ಕೃಪೆ: ANI

 ಹೊಸದಿಲ್ಲಿ, ಸೆ. 20: ರಾಮಜನ್ಮಭೂಮಿ-ಬಾಬರಿ ಮಸೀದಿ ಪ್ರಕರಣದಲ್ಲಿ ಹಿಂದೂಗಳ ಪರವಾಗಿ ತೀರ್ಪು ಬಂದರೆ, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರವನ್ನು ಚಿನ್ನದಿಂದ ನಿರ್ಮಿಸಲಾಗುವುದು ಎಂದು ಹಿಂದೂ ಮಹಾಸಭಾದ ಸ್ವಾಮಿ ಚಕ್ರಪಾಣಿ ಶುಕ್ರವಾರ ಹೇಳಿದ್ದಾರೆ.

 ‘‘ನವೆಂಬರ್ ಮೊದಲ ವಾರದಲ್ಲಿ ಹಿಂದೂ ಮಹಾ ಸಭಾ ಅಥವಾ ಹಿಂದೂಗಳ ಪರವಾಗಿ ತೀರ್ಪು ಬಂದ ಕೂಡಲೇ ನಾವು ಶ್ರೀರಾಮ ಮಂದಿರವನ್ನು ಕಲ್ಲು, ಇಟ್ಟಿಗೆಗಳ ಬದಲಾಗಿ ಚಿನ್ನದಲ್ಲಿ ನಿರ್ಮಿಸಲು ನಿರ್ಧರಿಸಿದ್ದೇವೆ’’ ಎಂದು ಅವರು ತಿಳಿಸಿದ್ದಾರೆ.

‘‘ಭಾರತ ಮಾತ್ರವಲ್ಲ ಜಗತ್ತಿನಾದ್ಯಂತದ ಸನಾತನ ಧರ್ಮಿ ಹಿಂದೂಗಳು ಶ್ರೀರಾಮ ಮಂದಿರ ನಿರ್ಮಾಣ ಮಾಡಲು ಚಿನ್ನವನ್ನು ಕೊಡುಗೆಯಾಗಿ ನೀಡಲಿದ್ದಾರೆ’’ ಎಂದು ಅವರು ಹೇಳಿದರು.

 ರಾಮಜನ್ಮಭೂಮಿ-ಬಾಬರಿ ಮಸೀದಿ ಪ್ರಕರಣದ ವಿಚಾರಣೆ ಅಕ್ಟೋಬರ್ 18ರಂದು ಪೂರ್ಣಗೊಳಿಸಬೇಕಾಗಿರುವುದರಿಂದ, ಮಧ್ಯಸ್ಥಿಕೆ ಸಮಿತಿ ತನ್ನ ಕಾರ್ಯವನ್ನು ಗೌಪ್ಯತೆಯಡಿ ಮುಂದುವರಿಸಬಹುದು ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News