ಕಳವು ಪ್ರಕರಣ ಹೆಚ್ಚಳ; ಜಾಗೃತರಾಗಲು ಪೊಲೀಸ್ ಕರೆ

Update: 2019-09-20 16:44 GMT

ಮಂಗಳೂರು, ಸೆ.20: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ ಕಳವು ಪ್ರಕರಣ ಹೆಚ್ಚಳವಾಗುತ್ತಿದ್ದು, ಇದರ ಬಗ್ಗೆ ವಿಶೇಷ ಜಾಗೃತರಾಗಬೇಕಾಗಿದೆ ಎಂದು ನಗರ ನಿಯಂತ್ರಣ ಕೊಠಡಿಯಿಂದ ಸಾರ್ವಜನಿಕರಿಗೆ ಮಾಹಿತಿ ರವಾನಿಸಲಾಗಿದೆ.

ನಗರ ವ್ಯಾಪ್ತಿಯಲ್ಲಿ ಖಾಲಿ ಇರುವ ಮನೆಗಳು, ಅಪಾರ್ಟ್‌ಮೆಂಟ್, ಒಂಟಿ ಮನೆಗಳನ್ನೇ ಕೇಂದ್ರವಾಗಿಸಿಕೊಂಡು ಕಳವು ಪ್ರಕರಣಗಳು ಹೆಚ್ಚಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರು ಜಾಗೃತರಾಗಬೇಕು. ಮುಖ್ಯವಾಗಿ ಮನೆ, ಅಪಾರ್ಟ್‌ಮೆಂಟ್‌ನಿಂದ ತುಂಬಾ ದಿನಗಳವರೆಗೆ ದೂರ ಪ್ರವಾಸ ಹೋಗುತ್ತಿರುವ ಸಂದರ್ಭ ಸಂಬಂಧಪಟ್ಟ ಪೊಲೀಸ್ ಠಾಣೆ, ಬೀಟ್ ಪೊಲೀಸರಿಗೆ ಸೂಚನೆ ನೀಡಬೇಕು. ಈ ರೀತಿ ಮಾಹಿತಿ ನೀಡಿದರೆ ಆ ಮನೆಯ ಮೇಲೆ ಪೊಲೀಸರು ವಿಶೇಷ ನಿಗಾಯಿರಿಸಲಿದ್ದಾರೆ. ಅಪಾರ್ಟ್‌ಮೆಂಟ್ ವಾಚ್‌ಮೆನ್‌ಗೂ ಮಾಹಿತಿ ನೀಡಬೇಕು ಎಂದು ಸಂದೇಶದಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News