ಮಂಗಳೂರು: ವಿಮಾನ ಹಾರಿಸಿದ 13ರ ಹರೆಯದ ಬಾಲಕ!

Update: 2019-09-20 18:01 GMT

ಮಂಗಳೂರು: ಆತ 13 ವರ್ಷದ ಬಾಲಕ ಆದಿತ್ಯ ಪವಾರ್ ವಿಮಾನ, ಹೆಲಿಕಾಪ್ಟರ್ ಹಾರಿಸುವುದರಲ್ಲಿ ನಿಸ್ಸೀಮ. ಸಹ್ಯಾದ್ರಿಯಲ್ಲಿ ಶುಕ್ರವಾರ ನಡೆದ ಸಹ್ಯಾದ್ರಿ ಏರೋಫಿಲಿಯಾ ಕಾರ್ಯಕ್ರಮದಲ್ಲಿ ಆತ ತನ್ನ ಚಾಕಚಕ್ಯತೆ ತೋರಿದ್ದಾನೆ.

ಆದಿತ್ಯ ದಿಲ್ಲಿ ಪಬ್ಲಿಕ್ ಸ್ಕೂಲ್‌ನ ವಿದ್ಯಾರ್ಥಿ. ಐದೂವರೆ ವರ್ಷದ ವಿದ್ಯಾರ್ಥಿಯಾಗಿದ್ದಾಗ ಮುಂಬೈಯ ಆ್ಯಂಬಿವಾಲಿಯಲ್ಲಿ ಅಂತರ್‌ರಾಷ್ಟ್ರೀಯ ಮಟ್ಟದ ಏರೋ ಮಾಡೆಲಿಂಗ್‌ನ ಪ್ರದರ್ಶನದಲ್ಲಿ ಭಾಗವಹಿಸಿ ತನ್ನ ತಂದೆ ಅಭಯ ಪವಾರ್ ಮಾರ್ಗದರ್ಶನದಲ್ಲಿ ನಿರ್ಮಿಸಿದ ಪುಟ್ಟ ವಿಮಾನವನ್ನು ರಿಮೋಟ್ ಮೂಲಕ ಹಾರಿಸಿ ಪ್ರಥಮ ಬಹುಮಾನ ಗಳಿಸಿದ್ದನು.

ಶುಕ್ರವಾರ ಹೆತ್ತವರೊಂದಿಗೆ ಸಹ್ಯಾದ್ರಿಗೆ ಬಂದಿದ್ದ ಆದಿತ್ಯ ಸುಮಾರು 500 ಗ್ರಾಂ ತೂಕದ ವಿಮಾನದ ಪುಟ್ಟ ಮಾದರಿಯನ್ನು ನೆಲದ ಮೇಲಿನ ರನ್‌ವೇಯಲ್ಲಿ ಓಡಿಸಿ ಮೇಲಕ್ಕೆ ಹಾರಿಸಿದ್ದಾನೆ. ಅಲ್ಲಿ ಗಿರಿ ಗಿರಿ ತಿರುಗಿಸಿದ್ದಾನೆ, ಅಷ್ಟೇ ಕರಾರುವಕ್ಕಾಗಿ ಮತ್ತೆ ರನ್‌ವೇಯ ಮೇಲಿ ಇಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾನೆ.

ಆದಿತ್ಯ ಹೇಳುವ ಪ್ರಕಾರ ಹೆಲಿಕಾಪ್ಟರ್ ಸ್ವಲ್ಪ ಕೆಳ ಹಂತದಲ್ಲಿ ಹಾರುತ್ತದೆ. ತನ್ನ ತಂದೆ ತಾಯಿಯ ಪೋತ್ಸಾಹದಿಂದ ಇದು ಸಾಧ್ಯವಾಗಿದೆ. ಇದರ ರಚನೆಗೆ ಸುಮಾರು 35ರಿಂದ 40 ಸಾವಿರ ರೂ. ವೆಚ್ಚ ತಗಲುತ್ತದೆ ಎನ್ನುತ್ತಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News