ಪ್ರವಾಹ ಪೀಡಿತ ಸಂತ್ರಸ್ತರಿಗೆ ತಾತ್ಕಾಲಿಕ ಮನೆ: ಹೆಚ್‍.ಆರ್.ಎಸ್ ಉಡುಪಿ ತಂಡದ ಮಾನವೀಯ ಕಾರ್ಯ

Update: 2019-09-20 17:39 GMT

ಕಾಪು: ಜಮಾಅತೇ ಇಸ್ಲಾಮೀ ಹಿಂದ್‍ನ ಸಮಾಜ ಸೇವಾ ವಿಭಾಗದ ಹ್ಯುಮಾನಿಟಿರೇನೀಯಮ್ ರಿಲೀಫ್ ಸೊಸೈಟಿ ( ರಿ ) ನ ತಂಡವು  ಪ್ರವಾಹ ಪೀಡಿತ ಕೊಡಗು ಜಿಲ್ಲೆಯ ನೆಲ್ಲಿ ಹುದಿಕೇರಿ ಗ್ರಾಮದ 3 ನೇ ವಾರ್ಡ್‍ನಲ್ಲಿ ತಾತ್ಕಾಲಿಕ ಮನೆಗಳನ್ನು ನಿರ್ಮಿಸಿ ಕೊಡುವ ಮೂಲಕ ಮಾನವೀಯತೆ ಮೆರೆದಿದೆ. 

ಇಲ್ಲಿನ ಗ್ರಾಮದಲ್ಲಿ 34 ಮನೆಗಳು ಸಂಪೂರ್ಣವಾಗಿ ಕುಸಿದಿದ್ದು ಸುಮಾರು 22 ಮನೆಗಳು ಭಾಗಶಃ ಹಾನಿಗೀಡಾಗಿತ್ತು. ಪ್ರವಾಹದಿಂದಾಗಿ ದೈನಂದಿನ ಸಾಮಗ್ರಿ, ಪಾತ್ರೆ ಪಗಡಿ, ಬಟ್ಟೆ ಬರೆಗಳು ಹಾಗೂ ಜಾನುವಾರುಗಳು ಕೊಚ್ಚಿ ಹೋಗಿ ಬದುಕು ದುಸ್ತರವಾಗಿ ಪರಿಣಮಿಸಿತ್ತು. 

ಈ ಹಿನ್ನಲೆಯಲ್ಲಿ ಹ್ಯುಮಾನಿಟಿರೇನೀಯಮ್ ರಿಲೀಫ್ ಸೊಸೈಟಿ ಇಡೀ ಪ್ರದೇಶದ ಸರ್ವೇ ಮಾಡಿ ಅಗತ್ಯವುಳ್ಳ ಎಲ್ಲಾ ಕುಟುಂಬಗಳಿಗೆ ಮಾನವೀಯ ಕರ್ತವ್ಯದ ನೆಲೆಯಲ್ಲಿ ರೇಷನ್‍ನ ವ್ಯವಸ್ಥೆ ಮಾಡಿಕೊಟ್ಟಿತು. ಹಾಗೂ ಅಗತ್ಯವುಳ್ಳ ಎಲ್ಲಾ ಕುಟುಂಬಗಳಿಗೆ ಉಳಕೊಳ್ಳಲು 12 * 10 ಚ. ಅ. ಯ ಶೆಡ್ ನಿರ್ಮಿಸಿ ಕೊಡುವ ಯೋಜನೆಯನ್ನು ರೂಪಿಸಿತು. 

ಉಡುಪಿಯಿಂದ  ಹೆಚ್  ಆರ್ ಎಸ್ ನ ಜಿಲ್ಲಾ ಸಂಚಾಲಕ ಹಸನ್ ಕೊಡಿಬೆಂಗ್ರೆಯವರ ನೇತೃತ್ವದಲ್ಲಿ ಜಮಾಆತೇ ಇಸ್ಲಾಮೀ ಹಿಂದ್ ಹೂಡೆಯ ಸ್ಥಾನೀಯ ಅಧ್ಯಕ್ಷ ಅಬ್ದುಲ್ ಖಾದರ್, ಕಾಪು ಸ್ಥಾನೀಯ ಅಧ್ಯಕ್ಷ ಅನ್ವರ್ ಅಲಿ ಕಾಪು ಸಹಿತ 20 ಮಂದಿಯ ತಂಡ ನೆರವು ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು.

40 ವರ್ಷಗಳಿಂದ ನಾವು ಇಲ್ಲಿ ವಾಸಿಸುತ್ತಿದ್ದು, ಇಂತಹ ಪ್ರವಾಹ ಈ ಪ್ರದೇಶದಲ್ಲಿ ನೋಡಿರಲಿಲ್ಲ ವೆಂದು ಇಲ್ಲಿಯ ನಿವಾಸಿಗಳು ತಮ್ಮ ಅನುಭವವನ್ನು  ಹೆಚ್. ಆರ್. ಎಸ್ ತಂಡದ ಮುಂದೆ ಹೇಳಿದರು. 

ಹಕ್ಕು ಪತ್ರ ಇಲ್ಲ; ಕಾವೇರಿ ನದಿ ಪ್ರದೇಶವಾಗಿರುವ ಇಲ್ಲಿ ಇದುವರೆಗೂ ಹಕ್ಕುಪತ್ರ ದೊರಕಿಲ್ಲ. ಆದರೆ ಕುಡಿಯುವ ನೀರು ಪಂಚಾಯತ್ ಒದಗಿಸಿ ಕೊಟ್ಟಿದ್ದು, ವಿದ್ಯುತ್ ಸಂಪರ್ಕ, ಆಧಾರ್ ಕಾರ್ಡ್, ರೇಷನ್ ಕಾರ್ಡ್ , ವೋಟರ್ ಐಡಿ ಗಳನ್ನೂ ಈ ಕುಟುಂಬದವರು ಪಡೆದಿರುತ್ತಾರೆ ಎನ್ನುತ್ತಾರೆ ಅನ್ವರ್ ಅಲಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News