​ವಿಟ್ಲ: ಮಹಡಿಯಿಂದ ಬಿದ್ದು ಗಾಯಗೊಂಡಿದ್ದ ಯುವಕ ಮೃತ್ಯು

Update: 2019-09-21 16:38 GMT

ವಿಟ್ಲ, ಸೆ.‌21: ವಿಟ್ಲ ಸಮೀಪದ ಮರಕ್ಕಿನಿ ಎಂಬಲ್ಲಿ ಮಹಡಿಯಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೇ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ಮೃತಪಟ್ಟಿದ್ದಾರೆ.

ವಿಟ್ಲ ಪಡ್ನೂರು ಗ್ರಾಮದ ಕೊಡಂಗಾಯಿ ನಿವಾಸಿ ಫಾರೂಕ್(35) ಮೃತಪಟ್ಟ ಯುವಕ. ಇವರು ವಿಟ್ಲದ ಶಾಮಿಯಾನ ಅಂಗಡಿಯಲ್ಲಿ ಕಳೆದ ಎಂಟು ವರ್ಷದಿಂದ ಕೆಲಸ ಮಾಡುತ್ತಿದ್ದು, ಸೆ.19ರಂದು ಅಡ್ಯನಡ್ಕ ಸಮೀಪದ ಮರಕ್ಕಿನಿ ಎಂಬಲ್ಲಿ ಮನೆಯೊಂದರ ಮಹಡಿಯಿಂದ ಕೆಳಗಡೆ ಬಿದ್ದು ಗಂಭೀರ ಗಾಯಗೊಂಡಿದ್ದ ಇವರನ್ನು ತಕ್ಷಣವೇ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಇಂದು ರಾತ್ರಿ  ಮೃತಪಟ್ಟಿದ್ದಾರೆಂದು ಕುಟುಂಬ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News