ಹಕ್ಕಿಗಳ ವಾಸಕ್ಕೆ ಫ್ಲ್ಯಾಟ್ ನಿರ್ಮಿಸಿದೆ ಇಲ್ಲಿನ ಆಡಳಿತ !

Update: 2019-09-21 17:24 GMT

ಲಕ್ನೊ, ಸೆ.21: ಸಣ್ಣಪುಟ್ಟ ಹಕ್ಕಿಗಳಿಗೆ ಸುರಕ್ಷಿತ ನೆಲೆ ಒದಗಿಸುವ ಪ್ರಯತ್ನವಾಗಿ ಗಾಝಿಯಾಬಾದ್ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರಿಗೆ ನೀಡಲಾಗಿರುವ ಸರಕಾರಿ ನಿವಾಸದಲ್ಲಿ ಹಕ್ಕಿಗಳಿಗಾಗಿಯೇ ಫ್ಲ್ಯಾಟ್ ಒಂದನ್ನು ನಿರ್ಮಿಸಿದೆ.

ಉಪಾಧ್ಯಕ್ಷರ ನಿವಾಸದ ಬಳಿ ಕಬ್ಬಿಣದ ಕಂಬವನ್ನು ಸ್ಥಾಪಿಸಿ ಅದರಲ್ಲಿ 60 ಹಂತಗಳ ಹಕ್ಕಿಗಳ ಫ್ಲಾಟ್ ನಿರ್ಮಿಸಲಾಗಿದೆ. ಮೇಲುಗಡೆ ಬಿಸಿಲು, ಮಳೆಯಿಂದ ರಕ್ಷಣೆ ನೀಡಲು ಕೊಡೆಯ ಆಕಾರದ ಕವಚ ರಚಿಸಲಾಗಿದೆ. ಇದರೊಳಗೆ ಹಕ್ಕಿಗಳಿಗೆ ವಾಸಿಸಲು ಸಣ್ಣಸಣ್ಣ ಗೂಡಿನಂತಹ ಮನೆಗಳಿವೆ.

ಹಕ್ಕಿಗಳ ಫ್ಲಾಟ್ ನಿರ್ಮಾಣಕ್ಕೆ ಸುಮಾರು 2 ಲಕ್ಷ ರೂ. ವೆಚ್ಚವಾಗಿದೆ. ಹಕ್ಕಿಗಳಿಗೆ ನೆಲೆ ಕಲ್ಪಿಸುವ ಜೊತೆಗೆ, ಸ್ಥಳೀಯರಿಗೆ ಪ್ರಕೃತಿಯೊಂದಿಗೆ ನಿಕಟ ಸಂಪರ್ಕ ಕಲ್ಪಿಸುವ ಉದ್ದೇಶವೂ ಇದರ ಹಿಂದಿದೆ . ಕಟ್ಟಡ ನಿರ್ಮಿಸುವವರು ಈ ರೀತಿಯ ಕನಿಷ್ಟ ಒಂದು ಹಕ್ಕಿಮನೆಯನ್ನು ನಿರ್ಮಿಸುವಂತೆ ಮನವಿ ಮಾಡಿಕೊಳ್ಳಲಾಗುವುದು ಎಂದು ಗಾಝಿಯಾಬಾದ್ ಅಭಿವೃದ್ಧಿ ಪ್ರಾಧಿಕಾರ(ಜಿಡಿಎ)ದ ಉಪಾಧ್ಯಕ್ಷೆ ಕಾಂಚನ್ ವರ್ಮ ಹೇಳಿದ್ದಾರೆ.

ಮನೆಯ ಕೈತೋಟದಲ್ಲಿ ನಿರ್ಮಿಸಲಾಗಿರುವ ಪ್ರಪ್ರಥಮ ಹಕ್ಕಿಗಳ ಫ್ಲಾಟ್‌ನಲ್ಲಿ ಹಕ್ಕಿಗಳಿಗಾಗಿ ನೀರಿನ ಸೌಲಭ್ಯವಿದೆ. ಹಕ್ಕಿಗಳಿಗೆ ಆಹಾರ ಉಣಿಸುವ ಜವಾಬ್ದಾರಿ ತನ್ನದಾಗಿದೆ. ಇದೊಂದು ಪ್ರಾಯೋಗಿಕ ಯೋಜನೆಯಾಗಿದ್ದು ಇತರ ಜಿಡಿಎ ವಸತಿ ಯೋಜನೆಯಡಿ ಹಕ್ಕಿಗಳಿಗಾಗಿ ಇಂತಹ ಇನ್ನಷ್ಟು ಮನೆಗಳು ನಿರ್ಮಾಣವಾಗಲಿದೆ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News