ಮೋಟರ್ ವಾಹನ ಕಾಯ್ದೆ ವಿರುದ್ಧದ ಪ್ರತಿಭಟನೆಗೆ ಬೆಂಬಲ

Update: 2019-09-21 17:41 GMT

ಮಂಗಳೂರು, ಸೆ.21:ಕೇಂದ್ರ ಸರಕಾರವು ಇತ್ತೀಚೆಗೆ ಹೊಸ ಮೋಟರ್ ವಾಹನ ಕಾಯ್ದೆಯನ್ನು ಜಾರಿಸಿಗೊಳಿಸಿರುವುದರಿಂದ ವಾಹನ ಚಾಲಕರು/ಸವಾರರು ಭಾರೀ ಸಮಸ್ಯೆ ಎದುರಿಸುತ್ತಿದ್ದು, ಇದನ್ನು ವಿರೋಧಿಸಿ ಮೋಟಾರು ವಾಹನ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಸೆ.25ರಂದು ನಗರದ ಜಿಲ್ಲಾಧಿಕಾರಿ ಕಚೇರಿಯ ಮುಂದೆ ನಡೆಯುವ ಪ್ರತಿಭಟನೆಗೆ ಮಾನವ್ ಸಮಾನತಾ ಮಂಚ್ ಬೆಂಬಲ ಸೂಚಿಸಿದೆ.

ಸಮಾನತಾ ಮಂಚ್‌ನ ಮುಖಂಡರಾದ ಅಲಿ ಹಸನ್, ರೋಶನ್ ಪತ್ರಾವೋ, ವಸಂರ್ ಟೈಲರ್ ಜಂಟಿ ಹೇಳಿಕೆ ನೀಡಿ ಮೋಟಾರು ವಾಹನ ಕಾಯ್ದೆ ಉಲ್ಲಂಘಿಸಿದರೆ ಹಾಕಲಾಗುವ ದಂಡದಲ್ಲಿ ಹಲವು ಪಟ್ಟು ಹೆಚ್ಚಿಸಿರುವುದು ಖಂಡನೀಯ. ರಸ್ತೆಗಳ ಗುಣಮಟ್ಟಕ್ಕೆ ಆದ್ಯತೆ ನೀಡದೆ ಕೇಂದ್ರ ಸರಕಾರವು ದಂಡದ ಮೂಲಕ ಹಣ ಸಂಗ್ರಹಕ್ಕೆ ಇಳಿದಿದೆ. ಮೊದಲೇ ರಸ್ತೆಯ ಅವ್ಯವಸ್ಥೆಯಿಂದ ವಾಹನಗಳ ದುರಸ್ತಿಗೆ ಹಣ ವ್ಯಯಿಸಲು ಹೆಣಗಾಡುವ ಚಾಲಕರು/ಮಾಲಕರನ್ನು ಸುಲಿಯುವ ಈ ಪ್ರಕ್ರಿಯೆಗೆ ಕಡಿವಾಣ ಹಾಕಬೇಕು. ಅದಕ್ಕಾಗಿ ಸಮಾನ ಮನಸ್ಕರು ನಡೆಸುವ ಹೋರಾಟವನ್ನು ಬೆಂಬಲಿಸಿ ಕೇಂದ್ರ ಸರಕಾರಕ್ಕೆ ಎಚ್ಚರಿಕೆಯ ಗಂಟೆ ಬಾರಿಸಬೇಕಿದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News