ಭಟ್ಕಳ: ಕಡಲ ತೀರ ಸ್ವಚ್ಛತಾ ದಿನಾಚರಣೆ

Update: 2019-09-21 18:08 GMT

ಭಟ್ಕಳ: ಜಿಲ್ಲಾಡಳಿತ, ಹಾಗೂ ತಾಲೂಕಾಡಳಿತ, ತಾಲೂಕ್ ಪಂಚಾಯತ್, ಪುರಸಭೆ ಭಟ್ಕಳ ಹಾಗೂ ಜಾಲಿ ಪಟ್ಟಣ ಪಂಚಾಯತ್ ರವರ ಸಂಯುಕ್ತ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಕಡಲ ತೀರ ಸ್ವಚ್ಛತಾ ದಿನಾಚರಣೆಯನ್ನು ಶನಿವಾರದಂದು ಮುರುಡೇಶ್ವರ ಸಮುದ್ರ ಕಡಲ ತೀರದಲ್ಲಿ ನಡೆಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಭಟ್ಕಳದ ಸಹಾಯಕ ಆಯುಕ್ತರಾದ ಸಾಜೀದ್ ಅಮಹ್ಮದ ಮುಲ್ಲಾ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸ್ವಚ್ಛತೆ ಎನ್ನುವುದು ಒಂದು ದಿನದ ಕೆಲಸವಲ್ಲ. ಅದು ನಮ್ಮ ಸಂಸ್ಕೃತಿಯಾಗಬೇಕು. ಭಾರತದಲ್ಲಿ ಸ್ವಚ್ಛತಾ ಕಾರ್ಯಕ್ರಮಕ್ಕೆ ಹೆಚ್ಚಿನ ಕಾಳಜಿ ತೋರಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಸಾರ್ವಜನಿಕರು ಒಂದು ದಿನ ಸ್ವಚ್ಛತೆ ಮಾಡಲು ಆಗದಿದ್ದರೆ ವಾರಕ್ಕೊಮ್ಮೆಯಾದರು ಸ್ವಚ್ಛತೆ ಮಾಡಿ ನಮ್ಮ ಸ್ಥಳವನ್ನು ಸ್ವಚ್ಛತೆಯಾಗಿ ಇಟ್ಟುಕೊಳ್ಳಬೇಕು. ಮುರುಡೇಶ್ವರ ಒಂದು ವಿಶ್ವ ಪ್ರಸಿದ್ಧವಾಗಿದ್ದು, ಪ್ರವಾಸಿಗರ ಅನುಕೂಲಕ್ಕಾಗಿ ಸಮುದ್ರ ತೀರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕಾಗಿರುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ. ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಅಧಿಕಾರಿಗಳು ಭಾಗಿಯಾಗಿರುವುದು ಸಂತೋಷ ತಂದಿದ್ದು  ಪುರಸಭೆಯ ಅಧಿಕಾರಿಗಳು ಪೌರ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ ಎಂದು ಹೇಳಿದರು.

ಈ ಸಂದರ್ಭ ತಹಸೀಲ್ದಾರ,ವಿ.ಪಿ.ಕೊಟ್ರಹಳ್ಳಿ, ಹಾಗೂ ಪುಸರಸಭೆ, ತಾಲೂಕ ಪಂಚಾಯತ, ತಹಸೀಲ್ದಾರ ಕಚೇರಿಯ ಸಿಬ್ಬಂದಿಗಳು,ಎ.ಸಿ ಕಛೇರಿ ಸಿಬ್ಬಂದಿಗಳು, ಕರಾವಳಿ ಪಡೆ,ಮಾವಳ್ಳಿ ಪಂಚಾಯತ,ಆರೋಗ್ಯ ಇಲಾಖೆ, ಆಶಾ ಕಾರ್ಯಕರ್ತರು,ಲಯನ್ಸ್ ಕ್ಲಬ್ ಸದಸ್ಯರೂ, ಬೀಚ್ ರಕ್ಷಣಾ ಸಿಬ್ಬಂದಿಗಳು,ಸೇರಿದಂತೆ 100 ಕ್ಕೂ ಅಧಿಕ ಮಂದಿ ಶ್ರಮದಾನ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News