ಸೈಂಟ್ ಅಲೋಶಿಯಸ್ ಕಾಲೇಜಿಗೆ ಸಮಗ್ರ ಪ್ರಶಸ್ತಿ; ಎಂ.ಜಿ.ಎಂ ಉಡುಪಿ ರನ್ನರ್ ಅಪ್

Update: 2019-09-21 18:17 GMT

ಕೊಣಾಜೆ: ಮಂಗಳೂರು ರೋಶನಿ ನಿಲಯದ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ಕಾಲೇಜಿನಲ್ಲಿ ಎರಡು ದಿನಗಳ ಕಾಲ ನಡೆದ ರಾಷ್ಟ್ರೀಯ ಮಟ್ಟದ ಅಂತರ್ ಕಾಲೇಜು “ಟ್ಯಾಲೆಂಟ್ ಹಂಟ್-ಎಕ್ಸ್‍ಪ್ರೆಷೆನ್” ಸ್ಪರ್ಧೆಯಲ್ಲಿ  ಸೈಂಟ್ ಅಲೋಶಿಯಸ್ ಕಾಲೇಜು ಮಂಗಳೂರು ಸಮಗ್ರ ಪ್ರಶಸ್ತಿಯನ್ನು,  ಎಂ.ಜಿ.ಎಂ ಕಾಲೇಜು ಉಡುಪಿ ರನ್ನರ್ ಅಪ್ ಪ್ರಶಸ್ತಿಯನ್ನು ಪಡೆದುಕೊಂಡಿತು.

ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕನ್ನಡ ಹಾಗೂ ತುಳು ಚಿತ್ರರಂಗದ ಖ್ಯಾತ ಯುವ ನಟ ಪೃಥ್ವಿ ಅಂಬರ್ ಸೃಜನಶೀಲತೆಯನ್ನು ನಾವೇ ಸೃಷ್ಟಿಸಿಕೊಳ್ಳಬೇಕು. ಪ್ರತಿಭೆ ಇನ್ನೊಂದು ಪ್ರತಿಭೆಗೆ ಬೆಳಕಾದರೆ ಹಲವಾರು ಪ್ರತಿಭೆಗಳು ಹುಟ್ಟಿಕೊಳ್ಳುತ್ತವೆ. ಇಂದು ವಿದ್ಯಾರ್ಥಿಗಳ ಪ್ರತಿಭಾನ್ವೇಷಣೆಗೆ ಬಹಳಷ್ಟು ಅವಕಾಶಗಳಿದ್ದು ಇದನ್ನು ಪ್ರತಿಯೊಬ್ಬರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಪ್ರಾಂಶುಪಾಲರು ಪ್ರೊ. ವಿನ್ಷಿಯಲ್ ಡಾ.ಜೆಸಿಂತಾ ಡಿಸೋಜ ವಹಿಸಿ ಮಾತನಾಡಿ, ಎನಿಮ್ಯಾಕ್ ಅಂದರೆ ನಿಮ್ಮೊಳಗಿನ ಮಗು. ಅದನ್ನು ಎಚ್ಚರಿಸಿದಾಗ ಸೃಜನಶೀಲತೆ ಹುಟ್ಟುತ್ತದೆ ಎಂದರು.

ವೇದಿಕೆಯಲ್ಲಿ ಚಲನಚಿತ್ರ ನಿರ್ಮಾಪಕಾರದ  ಸಂದೇಶರಾಜ್, ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಜ್ಯೂಲಿಯಟ್ ಸಿ.ಜೆ, ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಕು.ಸಾರಿಕಾ ಅಂಕಿತಾ ಉಪಸ್ಥಿತರಿದ್ದರು.

ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಮೆರುಲ್ಲಾ ಪಿಂಟೊ ಸ್ವಾಗತಿಸಿ, ನಷ್ಮಾ ಖತೀಜಾ ವಂದಿಸಿದರು. ವಿದ್ಯಾರ್ಥಿನಿ ಫಾತಿಮತುಲ್  ಫಾರಿಷಾ ಕಾರ್ಯಕ್ರಮ ನಿರೂಪಿಸಿದರು. ಸ್ಪರ್ಧೆಯಲ್ಲಿ ವಿವಿಧ ಕಾಲೇಜಿನ ತಂಡಗಳು ಭಾಗವಹಿದ್ದವು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News