ಮುರುಡೇಶ್ವರ ಸಮುದ್ರದಲ್ಲಿ ಯುವಕ ನೀರುಪಾಲು; ನಾಲ್ವರ ರಕ್ಷಣೆ
Update: 2019-09-22 17:48 IST
ಭಟ್ಕಳ: ಮುರುಡೇಶ್ವರಕ್ಕೆ ಬಂದ ಪ್ರವಾಸಿಗರಲ್ಲಿ ಓರ್ವ ಯುವಕ ನೀರುಪಾಲಾಗಿದ್ದು, ನಾಲ್ವರನ್ನು ರಕ್ಷಿಸಿದ ಘಟನೆ ರವಿವಾರ ಬೆಳಗ್ಗೆ ನಡೆದಿದೆ.
ಸಮುದ್ರಪಾಲಾದ ವ್ಯಕ್ತಿಯನ್ನು ಬೆಂಗಳೂರಿನ ಮಲ್ಲೇಶ್ವರಂ ನಿವಾಸಿ ರಾಜೀವ್ ನಟರಾಜ್(27) ಎಂದು ಗುರುತಿಸಲಾಗಿದೆ.
ಬೆಂಗಳೂರಿನಿಂದ 11 ಮಂದಿಯ ಪ್ರವಾಸಿಗರ ತಂಡವು ರವಿವಾರ ಬೆಳಿಗ್ಗೆ ಮುರುಡೇಶ್ವರಕ್ಕೆ ತಲುಪಿದ್ದು ಸಮುದ್ರದಲ್ಲಿ ಈಜಲು ಇಳಿದಿದ್ದಾರೆ. ಸಮುದ್ರದಲ್ಲಿ ಭಾರಿ ಅಲೆಗಳೊಂದಿಗೆ ಈಜಾಡುತ್ತ ಓರ್ವ ಯುವಕ ನೀರುಪಾಲಾಗಿದ್ದು, ನಾಲ್ವರನ್ನು ಸ್ಥಳೀಯ ಮೀನುಗಾರರು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿದುಬಂದಿದೆ.