ಮುಸ್ಸಂಜೆಯ ಕತೆಗಳು, ಚಂದ್ರೋದಯ ಕೃತಿ ಅನಾವರಣ

Update: 2019-09-22 13:51 GMT

ಉಡುಪಿ, ಸೆ.22: ಉಡುಪಿ ಸುಹಾಸಂ ಆಶ್ರಯದಲ್ಲಿ ಉದಯಕುಮಾರ್ ಹಬ್ಬು ಅವರ ಮುಸ್ಸಂಜೆಯ ಕತೆಗಳು ಹಾಗೂ ಶೀಲಾ ಸತ್ಯೇಂದ್ರ ಸ್ವಾಮಿ ಅವರ ಚಂದ್ರೋದಯ ಕೃತಿ ಅನಾವರಣ ಸಮಾರಂಭವು ಉಡುಪಿ ಕಿದಿ ಯೂರು ಹೋಟೆಲ್‌ನ ಸಭಾಂಗಣದಲ್ಲಿ ಶನಿವಾರ ಜರಗಿತು.

ಕೃತಿಗಳನ್ನು ಬಿಡುಗಡೆಗೊಳಿಸಿದ ಸಾಹಿತಿ ಎನ್.ರಾಮನಾಥ ಅಣುಕುದೊರೆ ಬೆಂಗಳೂರು ಮಾತನಾಡಿ, ಕೃತಿ ಅನಾವರಣಗೊಳ್ಳುವುದೆಂದರೆ ಸಾಹಿತ್ಯ ಲೋಕಕ್ಕೆ ಹೊಸತೊಂದು ಪುಸ್ತಕ ಸೇರ್ಪಡೆಗೊಂಡಂತೆ ಆಗುತ್ತದೆ. ಇದು ಸಾಹಿತ್ಯ ಮುಂದುವರಿಯುತ್ತಿದೆ ಎಂಬುದರ ಸಂಕೇತ. ಪುಸ್ತಕಗಿಂತ ಮಸ್ತಕದಲ್ಲಿ ಉಳಿ ಯುವ ಪುಸ್ತಕ ಪ್ರಕಟಗೊಂಡರೆ ಹೆಚ್ಚು ಅನುಕೂಲ ಎಂದು ಹೇಳಿದರು.

ಹಿರಿಯ ಪತ್ರಕರ್ತ ನಿತ್ಯಾನಂದ ಪಡ್ರೆ, ಎಂಜಿಎಂ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಪುತ್ತಿ ವಸಂತ್ ಕುವಾರ್ ಪುಸ್ತಕ ಪರಿಚಯ ಮಾಡಿದರು. ಪ್ರೇಮಶೇಖರ ದೆಹಲಿ, ಸುಹಾಸಂ ಕಾರ್ಯದರ್ಶಿ ಎಚ್.ಗೋಪಾಲ ಭಟ್ಟ ಉಪಸ್ಥಿತರಿದ್ದರು.

ಸುಹಾಸಂ ಅಧ್ಯಕ್ಷ ಎಚ್.ಶಾಂತರಾಜ ಐತಾಳ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀನಿವಾಸ ಉಪಾಧ್ಯ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News