ಮಂಗಳೂರು ದಸರಾ ಉತ್ಸವಕ್ಕೆ ಭರದ ಸಿದ್ಧತೆ

Update: 2019-09-22 14:23 GMT

ಮಂಗಳೂರು, ಸೆ.22; ನಗರದಲ್ಲಿ ದಸರಾ ಉತ್ಸವಕ್ಕೆ ಪೂರ್ವಭಾವಿ ತಯಾರಿ ಕಾರ್ಯ ಆರಂಭಗೊಂಡಿದೆ. ಸೆಪ್ಟೆಂಬರ್ 28 ರಿಂದ ಮಂಗಳೂರು ಮಹಾನಗರದಲ್ಲಿ ನವರಾತ್ರಿ ಹಬ್ಬದ ಆಚರಣೆಗಳು ಪ್ರಾರಂಭವಾಗಲಿದ್ದು, ವಿವಿಧ ಸೇವಾ ಸಮಿತಿಗಳಿಂದ ಹಲವೆಡೆ ಸಾರ್ವಜನಿಕ ಶಾರದಾ ಮಹೋತ್ಸವಗಳು ನಡೆಯಲಿವೆ.

ಕುದ್ರೋಳಿಯಿಂದ ಆರಂಭವಾಗುವ ಮಂಗಳೂರು ದಸರಾ ಉತ್ಸವದ ಮೆರವಣಿಗೆ ಸಂಬಂಧಿಸಿದಂತೆ ಕುದ್ರೋಳಿ, ಅಳಕೆ ಪರಿಸರದಲ್ಲಿ ಅಲಂಕಾರ ನಡೆಯುತ್ತಿದೆ. ಮಂಗಳೂರು ದಸರಾ ಉತ್ಸವಕ್ಕೆ ಪೂರಕವಾಗಿ ನಗರದ ವಿವಿಧ ಬೀದಿಗಳಲ್ಲಿ ದೀಪಾಲಂಕಾರದ ಸಿದ್ಧತೆ ನಡೆಯುತ್ತಿದೆ. ಶ್ರೀಮಂಗಳಾದೇವಿ, ಶ್ರೀವೆಂಕಟರಮಣ ದೇವಸ್ಥಾನ ರಥಬೀದಿಯಲ್ಲಿ ಭರದ ಸಿದ್ಧತೆ ನಡೆಯುತ್ತಿದೆ.

ಮಂಗಳೂರಿನಲ್ಲೂ ಮೈಸೂರಿನಂತೆ ಆದ್ದೂರಿಯಾಗಿ ದಸರಾ ಉತ್ಸವವನ್ನು ಆಚರಿಸಲಾಗುತ್ತದೆ. ಅದೇ ರೀತಿಯಲ್ಲಿ ವಿವಿಧ ದೇವಾಲಯಗಳಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಆದ್ದರಿಂದ ಯಾವುದೇ ಯುವಕ ಮಂಡಲಗಳು, ಶಾರದಾ ಮಹೋತ್ಸವ ಸೇವಾ ಸಮಿತಿಯವರು ಸಾರ್ವಜನಿಕ ಶಾರದಾ ಮಹೋತ್ಸವವನ್ನು ಆಚರಿಸಲು ವಿದ್ಯುತ್ ಸಂಪರ್ಕದ ಬಗ್ಗೆ ಅರ್ಜಿ ಸಲ್ಲಿಸಿದ್ದಲ್ಲಿ ಮೆಸ್ಕಾಂ ಕಚೇರಿಯಿಂದ ಯಾವುದೇ ವಿಳಂಬ ಮಾಡದೇ ಮಂಜೂರು ಮಾಡಬೇಕು. ಶೋಭಾಯಾತ್ರೆ ಮಂಗಳೂರಿನ ಹಲವು ಪ್ರಮುಖ ಬೀದಿಗಳಲ್ಲಿ ಸಂಚರಿಸುವುದರಿಂದ ಎಲ್ಲಾ ರಸ್ತೆಗಳಲ್ಲಿ ಯಾವುದೇ ಹೊಂಡ, ಗುಂಡಿಗಳಿದ್ದಲ್ಲಿ ಅದನ್ನು ತಕ್ಷಣ ಮುಚ್ಚಿ ಶೋಭಾಯಾತ್ರೆ ಸರಾಗವಾಗಿ ಸಾಗಲು ಅನುಕೂಲವಾಗುವಂತೆ ಮಂಗಳೂರು ಮಹಾನಗರ ಪಾಲಿಕೆ ಅವಶ್ಯಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್ ಸೂಚನೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News