ಸಿರಾಮಿಕ್: ಆಳ್ವಾಸ್‍ನಲ್ಲಿ ರಾಷ್ಟ್ರೀಯ ಕಾರ್ಯಾಗಾರ

Update: 2019-09-22 14:39 GMT

ಮೂಡುಬಿದಿರೆ: ಇಂಡಿಯನ್ ಸಿರಾಮಿಕ್ಸ್ ಸೊಸೈಟಿ ಕಾರ್ನಾಟಕ ಚಾರ್ಪಟರ್ (ಐಸಿಎಸ್‍ಕೆಸಿ) ಸಂಯೋಜನೆಯಲ್ಲಿ ಅಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕ್ ಇಂಜಿನಿಯರಿಂಗ್ ವಿಭಾಗದ ವತಿಯಿಂದ ಒಂದು ದಿನದ ರಾಷ್ಟ್ರೀಯ ಮಟ್ಟದ ಕಾರ್ಯಾಗಾರ ಮಿಜಾರಿನಲ್ಲಿರುವ ಎಐಟಿಇ ಕ್ಯಾಂಪಸ್‍ನಲ್ಲಿ ಆಯೋಜಿಸಲಾಯಿತು. 

ಐಸಿಎಸ್‍ಕೆಸಿ ಡಾ.ಎಸ್ ಶ್ಯಾಮ ರಾವ್ ಕಾರ್ಯಾಗಾರವನ್ನು ಉದ್ಘಾಟಿಸಿ, ಅಂತರ್ಜಾಲದಿಂದಾಗಿ ಇಂದು ಅನೇಕ ಬದಲಾವಣೆಗಳನ್ನು ಸಿರಾಮಿಕ್ ಕ್ಷೇತ್ರದಲ್ಲಿ  ಕಾಣಬಹುದು. ಅಂತರ್ಜಾಲದಿಂದಾಗಿ ಗ್ರಾಹಕನಿಗೆ ಅದರ ಬಗ್ಗೆ ಸಾಕಷ್ಟು ಮಾಹಿತಿ ಲಬಿಸುತ್ತದೆ. ವಸ್ತುಗಳಲ್ಲಿರುವ ದೋಷಗಳನ್ನು ಅತೀ ಬೇಗವಾಗಿ ಪತ್ತೆಹಚ್ಚಬಹುದು ಎಂದರು. 

ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ಫೆರ್ನಾಂಡಿಸ್ ಅಧ್ಯಕ್ಷತೆವಹಿಸಿ ಮಾತನಾಡಿ, ಸಿರಾಮಿಕ್ಸ್ ಇದು ಪ್ಲಾಸ್ಟೀಕ್ ಮತ್ತು ಲೋಹದ ವಸ್ತುಗಳಿಗಿಂತ ಮೊದಲೇ ಬಳಕೆಯಲ್ಲಿತ್ತು. ಸಿರಾಮಿಕ್ಸ್ ಅಧುನೀಕತೆಯ ಸ್ಪರ್ಶದಿಂದ ಇಂದು ಜೀವಂತವಾಗಿದೆ.  ಸಿರಾಮಿಕ್ಸ್ ಮಾನವನ ದಿನಬಳಕೆಯಲ್ಲಿ ಸಹಕರಿಸಿದ್ದು ಅಲ್ಲದೆ ಅದರಿಂದ ಯಾವುದೇ ಹಾನಿಗಳಿಲ್ಲ ಎಂದರು.

ಸಂಯೋಜಕ, ಮೆಕ್ಯಾನಿಕಲ್ ಇಂಜಿನಿರಿಂಗ್ ವಿಭಾಗದ ಮುಖ್ಯಸ್ಥ  ಡಾ. ಸತ್ಯನಾರಾಯಣ ಉಪಸ್ಥಿತರಿದ್ದರು. ಸಹಾಯಕ ಪ್ರಾಧ್ಯಪಕ ಪ್ರಮೋದ್ ವಿ.ಬಿ ನಿರೂಪಿಸಿದರು. ಪ್ರಾಧ್ಯಪಕ ಕೆ.ವಿ ಸುರೇಶ್ ವಂದಿಸಿದರು.

ಡಾ.ಎಸ್ ಶ್ಯಾಮ ರಾವ್, ಐಸಿಎಸ್‍ಕೆಸಿ ಜಂಟಿ ಕಾರ್ಯದರ್ಶಿಗಳಾದ ಡಾ.ಎಂ.ಜಿ ಆನಂದ ಕುಮಾರ್, ಡಾ. ದಿನೇಶ್ ರಂಗಪ್ಪ,  ಉಪಾಧ್ಯಕ್ಷ ಸಾಗಿರಾಜು ಚಂದ್ರ ಶೇಖರ್, ಡಾ. ಸಿ.ಡಿ ಮಧುಸೂದನ ಡಾ. ರಾಮಚಂದ್ರ ರಾವ್ ಕಾರ್ಯಾಗಾರದಲ್ಲಿ ಉಪನ್ಯಾಸ ನೀಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News