ಕುಂದಾಪುರ: ಅಂಗಡಿಗೆ ನುಗ್ಗಿ ಸೊತ್ತು ಕಳವು
Update: 2019-09-22 23:11 IST
ಕುಂದಾಪುರ, ಸೆ.22: ಗೋಪಾಡಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 66ರ ಹೂವಿನಕೆರೆ ಸ್ವಾಗತ ಗೋಪುರ ಬಳಿಯ ಅಂಗಡಿಗೆ ಸೆ.21ರಂದು ರಾತ್ರಿ ವೇಳೆ ನುಗ್ಗಿದ ಕಳ್ಳರು ಸಾವಿರಾರು ರೂ. ವೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಗೋಪಾಡಿ ಗ್ರಾಮದ ಮಡಿವಾಳಬೆಟ್ಟುವಿನ ರಾಜೀವ ಎಂಬವರ ಶ್ರೀರಾಮ ಜನರಲ್ ಸ್ಟೋರ್ ಅಂಗಡಿಯ ಸಿಮೆಂಟ್ ಶೀಟನ್ನು ಜಾರಿಸಿ ಒಳನುಗ್ಗಿದ ಕಳ್ಳರು, 20,000ರೂ. ಮೌಲ್ಯದ ಸಿಗರೇಟ್ ಪ್ಯಾಕೇಟ್, 6,000ರೂ. ಚಿಲ್ಲರೆ ಹಣ ಹಾಗೂ ಎಟಿಎಂ ಕಾರ್ಡ, ಆಧಾರ್ ಕಾರ್ಡ, ಪಾನ್ ಕಾರ್ಡ್ ಮತ್ತು ಚುನಾವಣಾ ಗುರುತಿನ ಚೀಟಿಯನ್ನು ಕಳವು ಮಾಡಿದ್ದು ಕದ್ದ ಎಟಿಎಂ ಕಾರ್ಡ್ ಮೂಲಕ 40,000ರೂ. ನಗದನ್ನು ಡ್ರಾ ಮಾಡಿರುವುದಾಗಿ ದೂರಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.