ಮಣಿಪಾಲ: ಮನೆಗೆ ನುಗ್ಗಿ ಸೊತ್ತು ಕಳವು

Update: 2019-09-22 17:42 GMT

ಮಣಿಪಾಲ, ಸೆ.22: ವಿದ್ಯಾರತ್ನ ನಗರದ ಮನೆಯೊಂದಕ್ಕೆ ಸೆ.21ರಂದು ರಾತ್ರಿ ವೇಳೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.

ರಮೇಶ್ ನಾಯಕ್ ಎಂಬವರ ಮನೆಯ ಕಿಟಕಿಯ ಮೂಲಕ ಮನೆಯ ಬಾಗಿಲಿನ ಚಿಲಕವನ್ನು ತೆಗೆದು ಒಳನುಗ್ಗಿದ ಕಳ್ಳರು, ಬೆಡ್ರೂಂನಲ್ಲಿ ಇಟ್ಟಿದ್ದ ಒಟ್ಟು 80 ಸಾವಿರ ರೂ. ಮೌಲ್ಯದ 2 ಲ್ಯಾಪ್‌ಟಾಪ್‌ಗಳು ಮತ್ತು ವಾರ್ಡ್ ರೂಮ್‌ನಲ್ಲಿದ್ದ 1,48,000 ರೂ. ಮೌಲ್ಯದ ಮಂಗಲ ಸೂತ್ರ, ಕೋರಲ್ ಚೈನ್, ಬ್ರಾಸ್ಲೆಟ್, 2 ಬಳೆಗಳು, 1 ಗೋಲ್ಡ್ ಕಾಯಿನ್ಗಳನ್ನು ಕಳವುಗೈದಿ ರುವುದಾಗಿ ದೂರಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News