ಮೂಡುಬಿದಿರೆ: ಸ್ವಾಮಿ ವಿವೇಕಾನಂದ ಸಂಸ್ಥೆಯಿಂದ ಗುರುವಂದನೆ

Update: 2019-09-22 17:51 GMT

ಮೂಡುಬಿದಿರೆ: ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ಕಿನ್ನಿಗೋಳಿ ಆಶ್ರಯದಲ್ಲಿ ಇಲ್ಲಿನ ಸಮಾಜಮಂದಿರದಲ್ಲಿ ರವಿವಾರ ನಡೆದ ಗುರುವಂದನೆ ಹಾಗೂ ಪ್ರತಿಭಾ ಪ್ರದರ್ಶನ ಕಾರ್ಯಕ್ರಮವನ್ನು ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ ಉದ್ಘಾಟಿಸಿದರು. 

ನಂತರ ಮಾತನಾಡಿದ ಅವರು ಮಕ್ಕಳ ಜ್ಞಾನ, ಪ್ರತಿಭೆಗೆ ರೂಪು ನೀಡುವ ಕೆಲಸವನ್ನು ನಿಷ್ಠೆಯಿಂದ ಶಿಕ್ಷಕರು ಮಾಡುತ್ತಿದ್ದಾರೆ. ಅಂತಹ ಶಿಕ್ಷಕರನ್ನು ಗುರುತಿಸಿ ಗೌರವಿಸುವುದು ಪುಣ್ಯದ ಕೆಲಸ ಎಂದರು. 

ಸೇವಾ ಸಂಸ್ಥೆಯ ಸಂಚಾಲಕ ಜಗನ್ನಾಥ ಶೆಟ್ಟಿ ನಿಡ್ಡೋಡಿ ಚಾವಡಿ ಮನೆ ಅಧ್ಯಕ್ಷತೆಯಲ್ಲಿ ಪ್ರಸಕ್ತ ವರ್ಷದಲ್ಲಿ ನಿವೃತ್ತರಾದ ಶಿಕ್ಷಕ ಬಿ.ಜಯರಾಮ ರಾವ್( ಸಂತ ಇಗ್ನೇಶಿಯಸ್ ಪ್ರಾಥಮಿಕ ಶಾಲೆ ಕಡಲಕೆರೆ), ಸುಬ್ರಾಯ ಭಟ್ (ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಣಪಿಲ),ಅನ್ನಪೂರ್ಣೇಶ್ವರಿ ಎಂ.( ಸರ್ಕಾರಿ ಪ್ರಾಥಮಿಕ ಶಾಲೆ ಮಾಸ್ತಿಕಟ್ಟೆ), ಕೃಷ್ಣಮೂರ್ತಿ ವಿ.ಎ( ಶ್ರೀವಾಣಿ ವಿಲಾಸ ಶಾಲೆ ಅಶ್ವತ್ಥಪುರ), ನಾಗವೇಣಿ ಡಿ.( ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಲಬೆಟ್ಟು).  ಚಂದ್ರಕಲಾ ಬಾಯಿ( ಬಾಬು ರಾಜೇಂದ್ರ ಪ್ರಸಾದ್ ಪ್ರೌಢಶಾಲೆ ಮೂಡುಬಿದಿರೆ), ವಸಂತಿ ಯು. (ಸರ್ಕಾರಿ ಪ್ರಾಥಮಿಕ ಶಾಲೆ ಕಡಂದಲೆ), ಜೋಯ್ಸ್ ವಿಕ್ಟೋರಿಯಾ ಮೋನಿಸ್ (ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪುತ್ತಿಗೆ), ಸಿಸಿಲಿಯಾ ಹಿಲ್ಡಾ ಸಿಕ್ವೇರ( ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಿರ್ಕೇರೆ) ಅವರನ್ನು ಸನ್ಮಾನಿಸಲಾಯಿತು. 

ವಿಧಾನಪರಿಷತ್ ಮಾಜಿ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆ ಸಂಯುಕ್ತ ಮಹಾಪ್ರಬಂಧಕ ಗಜಾನನ ಪೈ., ಪ್ರೌಢಶಾಲಾ ಸಹಶಿಕ್ಷಕ ಸಂಘದ ರಾಜ್ಯ ಉಪಾಧ್ಯಕ್ಷ ರಾಮಕೃಷ್ಣ ಶಿರೂರು, ರಾಜ್ಯ ಸರ್ಕಾರಿ ನೌಕರರ ಸಂಘದ ಮೂಡುಬಿದಿರೆ ತಾಲೂಕು ಅಧ್ಯಕ್ಷ ನಾಗೇಶ್ ಎಸ್., ಮೂಡುಬಿದಿರೆ ತಾಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಮಹಾದೇವ್ ಮುಖ್ಯ ಅತಿಥಿಯಾಗಿದ್ದರು. 

ಸುಧಾಕರ ರಾವ್, ಪ್ರೇಮಾ, ಸುರೇಂದ್ರ, ದಿನಕರ ಕುಂಭಾಶಿ, ರೇಣುಕಾ, ಜೆಸ್ಸಿಂತಾ, ನಾಗರತ್ನ, ಪ್ರಫುಲ್ಲಾ, ಯಮುನಾ,  ಸನ್ಮಾನಪತ್ರ ವಾಚಿಸಿದರು. ಪತ್ರಕರ್ತ ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸೀತಾರಾಮ ಶೆಟ್ಟಿ ವಂದಿಸಿದರು. 

ಪ್ರಕೃತಿ ಮಾರೂರು ಅವರಿಂದ ಭರತನಾಟ್ಯ, ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿರುವ ಹೊಸಂಗಡಿಯ ಮಕ್ಕಳಿಂದ ಪ್ರತಿಭಾ ಪ್ರದರ್ಶನ,  ಮೂಡುಬಿದಿರೆ ಟ್ವಿಸ್ಟರ್ ಡಾನ್ಸ್ ಅಕಾಡೆಮಿಯಿಂದ ನೃತ್ಯ ವೈವಿದ್ಯ ಹಾಗೂ ರಾಜ್ಯ ರಾಷ್ಟ್ರಮಟ್ಟದಲ್ಲಿ ಮಿಂಚಿದ ಬಾಲಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಬೆಳದಿಂಗಳ ಕಲಾಯಾನದ ಜೆಸರಿನಲ್ಲಿ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿಯ ಸಂಸ್ಥಾಪಕ ಡಾ.ಶೇಖರ ಅಜೆಕಾರು ಕಾರ್ಯಕ್ರಮ ಸಂಯೋಜಿಸಿದರು. ಅಮನ್ ಕರ್ಕೆರಾ, ತೀರ್ಥ ಪೊಳಲಿ ಕಾರ್ಯಕ್ರಮ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News