"ಆಧುನಿಕ ಪದ್ದತಿಯ ಬಾಳೆ ಬೇಸಾಯ ಮತ್ತು ರೈತರ ಸವಾಲುಗಳು ಹಾಗೂ ಪರಿಹಾರ"

Update: 2019-09-22 17:54 GMT

ಮೂಡುಬಿದಿರೆ: ಕೃಷಿ ವಿಚಾರ ವಿನಿಮಯ ಕೇಂದ್ರ ಮೂಡುಬಿದಿರೆ ಹಾಗೂ ಎಂಸಿಎಸ್ ಬ್ಯಾಂಕ್ ಇವುಗಳ ಸಹಯೋಗದೊಂದಿಗೆ ಎಂಸಿಎಸ್ ಬ್ಯಾಂಕ್ ಸಭಾಂಗಣದಲ್ಲಿ ಶನಿವಾರ 'ಆಧುನಿಕ ಪದ್ದತಿಯ ಬಾಳೆ ಬೇಸಾಯ ಮತ್ತು ರೈತರ ಸವಾಲುಗಳು ಹಾಗೂ ಪರಿಹಾರ' ಮಾಹಿತಿ ಕಾರ್ಯಕ್ರಮ ನಡೆಯಿತು. 

ಕೃಷಿ ಇಲಾಖೆ ಮಂಗಳೂರು ಇದರ ಉಪನಿರ್ದೇಶಕರಾದ ವೀಣಾ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ ಕರಾವಳಿ ಜಿಲ್ಲೆಯ ಕೃಷಿಕರು ಅಡಿಕೆ, ತೆಂಗು ಬೆಳೆಗಳಿಗೆ ಮಾತ್ರ ಒತ್ತು  ನೀಡುತ್ತಿದ್ದಾರೆ. ನಮಗೆ ಅನ್ನ ನೀಡುವ ಭತ್ತದ ಕೃಷಿಯನ್ನು ನಿರ್ಲಕ್ಷಿಸುವುದು ಸರಿಯಲ್ಲ. ನೈಸರ್ಗಿಕ ವಿಕೋಪ ಹೊರತುಪಡಿಸಿದರೆ ಆದುನಿಕ ಭತ್ತದ ಕೃಷಿ ಲಾಭದಾಯಕವಾಗಿದೆ ಎಂದ ಅವರು ತಾಂತ್ರಿಕ ಕೃಷಿ ಪದ್ದತಿಯಿಂದ ರೈತರು ಹೆಚ್ಚಿನ ಲಾಭ ಪಡೆಯಬಹುದು ಎಂದು ಹೇಳಿದರು.
  
ಕೃಷಿಕ ಪ್ರಭಾತ್‍ಚಂದ್ರ ಜೈನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು "ರೈತರು ಕೃಷಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಮತ್ತು ಮಿಶ್ರಬೆಳೆಗೆ ಒತ್ತು ನೀಡುವುದರಿಂದ ಜೀವನಮಟ್ಟವನ್ನು ಸುಧಾರಿಸಿಕೊಳ್ಳಬಹುದು" ಎಂದರು. 

ಅಧ್ಯಕ್ಷತೆ ವಹಿಸಿದ ಕೃಷಿ ವಿಚಾರ ವಿನಿಮಯ ಕೇಂದ್ರದ ಅಧ್ಯಕ್ಷ ಸುಭಾಶ್ಚಂದ್ರ ಚೌಟ `'ಅಲ್ಪ ಜಾಗದಲ್ಲಿ ಹೆಚ್ಚು ಬೆಳೆ ಪಡೆಯುವ ಕೃಷಿಯನ್ನು ಮಾಡಬೇಕು' ಎಂದು ಸಲಹೆಯಿತ್ತರು. ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಜೊ.ಪ್ರದೀಪ್ ಡಿ`ಸೋಜಾ ಬಾಳೆ ಗಿಡದಲ್ಲಿರುವ ವಿವಿಧ ತಳಿಗಳು, ನೆಡುವ ವಿಧಾನ ಮತ್ತು ರೋಗ ನಿಯಂಯತ್ರಣದ ಬಗ್ಗೆ ಮಾಹಿತಿ ನೀಡಿದರು. 

ಎಂಸಿಎಸ್ ಬ್ಯಾಂಕಿನ ಉಪಾಧ್ಯಕ್ಷ ಎಂ. ಬಾಹುಬಲಿ ಪ್ರಸಾದ್ ಉಪಸ್ಥಿತರಿದ್ದರು. ಹಿರಿಯ ಕೃಷಿಕ ಧನಕೀರ್ತಿ ಬಲಿಪ ಸ್ವಾಗತಿಸಿದರು. ಜಿನೇಂದ್ರ ಜೈನ್ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News