ಚೀನಾದ ಮಿಲಿಟರಿ ದೈತ್ಯಶಕ್ತಿ ಜಗತ್ತಿಗೆ ಬೆದರಿಕೆ: ಟ್ರಂಪ್ ಆತಂಕ

Update: 2019-09-22 18:07 GMT

 ಬೀಜಿಂಗ್,ಸೆ.21: ಚೀನಾದ ಹೆಚ್ಚುತ್ತಿರುವ ಸೇನಾ ದೈತ್ಯಬಲದ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಆ ಕಮ್ಯೂನಿಸ್ಟ್ ರಾಷ್ಟ್ರವು ಜಗತ್ತಿಗೆ ಒಂದು ಬೆದರಿಕೆಯಾಗಿ ಪರಿಣಮಿಸಿದೆ ಹಾಗೂ ತನ್ನ ರಕ್ಷಣಾ ಸಾಮರ್ಥ್ಯವನ್ನು ಬೆಳಸುವುದಕ್ಕಾಗಿ ಅದು, ಅಮೆರಿಕದ ಬೌದ್ಧಿಕ ಆಸ್ತಿಯನ್ನು ಬಳಸದಂತೆ ತಡೆಯಲು ತನ್ನ ಪೂರ್ವಾಧಿಕಾರಿಗಳು (ಹಿಂದಿನ ಅಮೆರಿಕ ಅಧ್ಯಕ್ಷರುಗಳು) ಯಾವುದೇ ಪ್ರಯತ್ನಗಳನ್ನು ಮಾಡಲಿಲ್ಲವೆಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿವಾದಿತ ದಕ್ಷಿಣ ಚೀನಾ ಸಮುದ್ರದಲ್ಲಿ ಅಮೆರಿಕವು ತನ್ನ ಪ್ರಭಾವವನ್ನು ವಿಸ್ತರಿಸುತ್ತಿರುವುದನ್ನು ತಡೆಯುವ ಯತ್ನವಾಗಿ ಚೀನಾವು ತನ್ನ ಮಿಲಿಟರಿ ಖರ್ಚನ್ನು 152 ಶತಕೋಟಿ ಡಾಲರ್‌ಗೆ ಏರಿಕೆ ಮಾಡಿದ್ದು, ಶೇ. 12ರಷ್ಟು ಹೆಚ್ಚಿಸಿದೆ.

 ‘‘ಚೀನಾವು ಜಗತ್ತಿಗೆ ಒಂದು ಬೆದರಿಕೆಯಾಗಿ ಪರಿಣಮಿಸಿದೆಯೆಂಬುದು ಸ್ಪಷ್ಟ. ಯಾಕೆಂದರೆ ಅವರು ಉಳಿದೆಲ್ಲರಿಗಿಂತಲೂ ಸೇನೆಯನ್ನು ಹೆಚ್ಚು ತ್ವರಿತವಾಗಿ ನಿರ್ಮಿಸುತ್ತಿದ್ದಾರೆತ ಹಾಗೂ ಪ್ರಾಮಾಣಿಕವಾಗಿ ಹೇಳುವುದಾದರೆ ಇದಕ್ಕಾಗಿ ಅವರು ಅಮೆರಿಕದ ಹಣವನ್ನು ಬಳಸಿಕೊಳ್ಳುತ್ತಿದ್ದಾರೆ’’ ಎಂದು ಟ್ರಂಪ್ ಹೇಳಿದರು.

ವಾಶಿಂಗ್ಟನ್‌ಗೆ ಆಗಮಿಸಿರುವ ಆಸ್ಟ್ರೇಲಿಯ ಪ್ರಧಾನಿ ಸ್ಕಾಟ್ ಮಾರಿಸನ್ ಜೊತೆ ಜಂಟಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡುತ್ತಿದ್ದಾಗ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.

    ಅಮೆರಿಕದ ಹಿಂದಿನ ಅಧ್ಯಕ್ಷರುಗಳು ವರ್ಷಕ್ಕೆ ಸುಮಾರು 500 ಶತಕೋಟಿ ಡಾಲರ್ ಹಣವನ್ನು ಅಮೆರಿಕದಿಂದ ಕೊಂಡೊಯ್ಯುವುದಕ್ಕೆ ಅವಕಾಶ ನೀಡಿದ್ದರು ಎಂದು ಟ್ರಂಪ್ ಆಪಾದಿಸಿದರು. ‘‘ ಅಮೆರಿಕದ ಹಿಂದಿನ ಅಧ್ಯಕ್ಷರು ನಮ್ಮ ಬೌದ್ಧಿಕ ಆಸ್ತಿಯ ಹಕ್ಕುಗಳನ್ನು ಚೀನಾವು ಕಸಿಯುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದರು ಹಾಗೂ ಆದರೆ ನಾನು ಅದಕ್ಕೆ ಆಸ್ಪದ ಕೊಡಲಾರೆ’’ ಎಂದು ಟ್ರಂಪ್ ಗುಡುಗಿದರು.

    ಅಮೆರಿಕಕ್ಕೆ ಆಮದಾಗುವ ಚೀನಿ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಡೊನಾಲ್ಡ್ ಟ್ರಂಪ್ ಅವರು ಕಳೆದ ವರ್ಷ ಶೇ.25ರಷ್ಟು ಏರಿಕೆ ಮಾಡಿದ ಬಳಿಕ ಜಗತ್ತಿನ ಈ ಎರಡು ಅತಿ ದೊಡ್ಡ ಆರ್ಥಿಕ ಶಕ್ತಿಗಳು ವಾಣಿಜ್ಯ ಸಮರದಲ್ಲಿ ಸಿಲುಕಿಕೊಂಡಿವೆ. ಅಮೆರಿಕದ ಕ್ರಮಕ್ಕೆ ಪ್ರತೀಕಾರವೆಂಬಂತೆ ಚೀನಾವು ಅಮೆರಿಕದಿಂದ ಅಮದು ಮಾಡು 1 ಒಟ್ಟು 250 ಶತಕೋಟಿ ಡಾಲರ್ ವೌಲ್ಯದ ಚೀನಿ ಉತ್ಪನ್ನಗಳ ಅಧಿಕ ತೆರಿಗೆಯನ್ನು ಏರಿತ್ತು. ಈ ನಡುವೆ ತಮ್ಮ ನಡುವೆ ಉಂಟಾಗಿರುವ ವಾಣಿಜ್ಯ ಬಿಕ್ಕಟ್ಟನ್ನು ಬಗೆಹರಿಸಲು ಅಮೆರಿಕ ಹಾಗೂ ಚೀನಾ ಮಾತುಕತೆಯನ್ನು ಪುನಾರಂಭಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News