ಇರಾನ್‌ನಿಂದ ದಾಳಿ ನಡೆದಿದ್ದಲ್ಲಿ ಯುದ್ಧದ ಕೃತ್ಯವೆಂದು ಪರಿಗಣಿಸುವೆ: ಸೌದಿ

Update: 2019-09-22 18:12 GMT

ರಿಯಾದ್,ಸೆ.22: ಸೌದಿ ಆರೇಬಿಯದ ತೈಲ ಸ್ಥಾವರಗಳ ಮೇಲೆ ಕಳೆದ ವಾರ ನಡೆದ ದಾಳಿಯನ್ನು ಇರಾನ್‌ನ ಪ್ರದೇಶದಿಂದ ಆಯೋಜಿಸಲಾಗಿತ್ತೆಂಬುದು ತನಿಖೆಯಿಂದ ಖಚಿತಗೊಂಡಲ್ಲಿ, ಸೌದಿ ಸಾಮ್ರಾಜ್ಯವು ಅದನ್ನು ಯುದ್ಧದ ಕೃತ್ಯವೆಂಬುದಾಗಿ ಪರಿಗಣಿಸಲಿದೆ. ಆದರೆ ರಿಯಾದ್ ಗಲ್ಫ್ ಬಿಕ್ಕಟ್ಟಿಗೆ ಸಂಬಂಧಿಸಿ ಶಾಂತಿಯುತ ಪರಿಹಾರವನ್ನು ಕಂಡುಹಿಡಿಯಲು ಯತ್ನಿಸಲಿದೆಯೆದು ಹಿರಿ.ಯ ಸೌದಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸೌದಿ ಆರೇಬಿಯದ ಮೇಲೆ ಕ್ಷಿಪಣಿಗಳು ಹಾಗೂ ಡ್ರೋನ್‌ಗಳನ್ನು ಉಡಾಯಿಸಿರುವುದಕ್ಕೆ ಇರಾನ್‌ನನ್ನು ನಾವು ಹೊಣೆಯಾಗಿ ಮಾಡಿದ್ದೇವೆ. ಈ ಕ್ಷಿಪಣಿಗಳು ಹಾಗೂ ಡ್ರೋನ್‌ಗಳು ಇರಾನಿ ನಿರ್ಮಿತವಾಗಿದ್ದು, ಇರಾನ್‌ನಿಂದಲೇ ಪೂರೈಕೆಯಾಗಿವೆ’ ಎಂಗು ಸೌದಿ ಆರೇಬಿಯದ ವಿದೇಶಾಂಗ ವ್ಯವಹಾರಗಳ ಸಹಾಯಕ ಸಚಿವ ಅದೆಲ್ ಅಲ್ ಜುಬೇರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News