‘ಹೌಡಿ ಮೋದಿ’ಯಲ್ಲಿರುವ ‘ಹೌಡಿ’ ಪದದ ಅರ್ಥವೇನು?
Update: 2019-09-23 19:52 IST
ರವಿವಾರ ಅಮೆರಿಕದ ಹ್ಯೂಸ್ಟನ್ ನಲ್ಲಿ ನಡೆದ ‘ಹೌಡಿ ಮೋದಿ’ ಕಾರ್ಯಕ್ರಮದಲ್ಲಿ 50 ಸಾವಿರದಷ್ಟು ಜನರು ಭಾಗವಹಿಸಿದ್ದರು. ಇದು ಅಮೆರಿಕದ ಇತಿಹಾಸದಲ್ಲಿ ಅತೀ ಹೆಚ್ಚು ಜನರು ಭಾಗವಹಿಸಿದ ವಿದೇಶಿ ನಾಯಕನೊಬ್ಬನ ಕಾರ್ಯಕ್ರಮ ಎನ್ನಲಾಗಿದೆ.
ಕಾರ್ಯಕ್ರಮಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗಮಿಸಿದ್ದು, ಭಾರತ ಮತ್ತು ಅಮೆರಿಕ ನಡುವಿನ ಸಂಬಂಧದ ಬಗ್ಗೆ ಮಾತನಾಡಿ, ಮೋದಿಯವರನ್ನು ಅಭಿನಂದಿಸಿದರು. ಇದೇ ಸಂದರ್ಭ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಟ್ರಂಪ್ ಪರ ಚುನಾವಣಾ ಪ್ರಚಾರ ನಡೆಸಿದರು.
ಭಾರತದ ಪ್ರಧಾನಿ ಅಮೆರಿಕದಲ್ಲಿ ಕಾರ್ಯಕ್ರಮ ನಡೆಸುತ್ತಿರುವ ಆಶ್ಚರ್ಯ ಒಂದೆಡೆಯಾದರೆ ಹಲವರಲ್ಲಿ ‘ಹೌಡಿ’ ಎಂದರೇನು ಎನ್ನುವ ಗೊಂದಲವಿತ್ತು. ‘ನೀವು ಹೇಗಿದ್ದೀರಿ?” ಎಂದು ಕೇಳಲು ಸ್ನೇಹಪೂರ್ವಕವಾಗಿ ಟೆಕ್ಸಾಸ್ ಮತ್ತು ಅಮೆರಿಕದ ಇತರ ನೈರುತ್ಯ ರಾಜ್ಯಗಳಲ್ಲಿ ಹೇಳುವ ಪದವಾಗಿ ‘ಹೌಡಿ’. ಇಂಗ್ಲಿಷ್ ನ ‘ಹೌ ಡು ಯು ಡು?” ಎನ್ನುವ ಪ್ರಶ್ನೆಯನ್ನು ಸಣ್ಣದಾಗಿ ‘ಹೌಡಿ” ಎಂದು ಕೇಳಲಾಗುತ್ತದೆ.