ವರ್ಷಪೂರ್ತಿ ಡೀಸೆಲ್ ನೀಡಲು ಆಗ್ರಹ: ಗಿಲ್‌ನೆಟ್ ಮೀನುಗಾರರ ಸಂಘದಿಂದ ಮೀನುಗಾರಿಕಾ ಅಧಿಕಾರಿಯ ಭೇಟಿ

Update: 2019-09-23 14:42 GMT

ಮಂಗಳೂರು, ಸೆ.23: ಮೀನುಗಾರರಿಗೆ ವರ್ಷಪೂರ್ತಿ ಸಬ್ಸಿಡಿ ದರದಲ್ಲಿ ಡೀಸೆಲ್ ನೀಡಬೇಕು ಎಂದು ಆಗ್ರಹಿಸಿ ದ.ಕ.ಜಿಲ್ಲಾ ಗಿಲ್‌ನೆಟ್ ಮೀನುಗಾರರ ಸಂಘದ ನಿಯೋಗವು ಸೋಮವಾರದ ದ.ಕ.ಜಿಲ್ಲಾ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿಗೆ ಮನವಿ ಸಲ್ಲಿಸಿತು.

ಸಬ್ಸಿಡಿ ದರದಲ್ಲಿ ಸೀಮೆಎಣ್ಣೆಯನ್ನು ವರ್ಷಪೂರ್ತಿ ಕೊಡದಿದ್ದರೆ ಮೀನುಗಾರಿಕೆ ನಡೆಸಲು ಕಷ್ಟವಾಗುತ್ತಿದೆ. ಕರಾರುವಕ್ಕಾಗಿ ಕೊಡದಿದ್ದರೆ ಮೀನುಗಾರರು ಜೀವನ ನಿರ್ವಹಿಸಲು ಹರಸಾಹಸಪಡಬೇಕಾಗಿದೆ. ಇದನ್ನು ಸರಕಾರದ ಗಮನಕ್ಕೆ ತಂದು ಶೀಘ್ರ ಪರಿಹಾರ ನೀಡಬೇಕು ಎಂದು ನಿಯೋಗ ಒತ್ತಾಯಿಸಿತು. ಅದಲ್ಲದೆ ಜೂನ್, ಜುಲೈ, ಆಗಸ್ಟ್‌ನಲ್ಲಿ ಬೋಟುಗಳ ತಪಾಸಣೆ ಕಾರ್ಯ ಮಾಡಬೇಕು. ಈ ಸಂದರ್ಭ ಮೀನುಗಾರಿಕೆಗೆ ರಜೆ ಇರುವ ಕಾರಣ ತಪಾಸಣೆಗೆ ಸಹಕರಿಸಲು ಮೀನುಗಾರರಿಗೂ ಅನುಕೂಲವಾಗುತ್ತದೆ ಎಂದು ನಿಯೋಗ ಮನವರಿಕೆ ಮಾಡಿಕೊಟ್ಟಿತು. ನಿಯೋಗದಲ್ಲಿ ಸಂಘದ ಅಧ್ಯಕ್ಷ ಅಲಿ ಹಸನ್ ಕುದ್ರೋಳಿ, ಸುಭಾಷ್ ಕಾಂಚನ್, ಪ್ರಾಣೇಶ್, ಹೈದರ್, ರಿಯಾಝ್, ಸತೀಶ್ ಕೋಟ್ಯಾನ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News