ಕೃಷ್ಣಾಪುರ: ಎಸ್ಕೆಎಸ್‌ಬಿವಿ ವತಿಯಿಂದ ಮಾದಕ ದ್ರವ್ಯ ವಿರುದ್ಧ ಜಾಗೃತಿ

Update: 2019-09-23 14:46 GMT

ಸುರತ್ಕಲ್, ಸೆ.23: ಸುರತ್ಕಲ್ ರೇಂಜ್‌ಗೊಳಪಟ್ಟ ಕೃಷ್ಣಾಪುರ ‘ಎ’ ಬ್ಲಾಕ್‌ನ ಅಲ್ ಮದ್ರಸತುಲ್ ಅಝೀಝಿಯದ ವಿದ್ಯಾರ್ಥಿ ಸಂಘಟನೆ ಎಸ್ಕೆಎಸ್‌ಬಿವಿ ವತಿಯಿಂದ ಮುಅಲ್ಲಿಂ ಡೇ ಪ್ರಯುಕ್ತ ರವಿವಾರ ಹಲವು ಕಾರ್ಯಕ್ರಮಗಳು ಜರುಗಿತು.

ಸಮಾಜದ ಯುವಕರು ಹಲವು ದುಶ್ಚಟಗಳಾದ ಮಾದಕದ್ರವ್ಯ, ಗಾಂಜಾ, ಸಿಗರೇಟು, ಬೀಡಿ, ಮದ್ಯಪಾನ ಇತ್ಯಾದಿಯಲ್ಲಿ ತೊಡಗಿಕೊಂಡಿದ್ದು, ಅವುಗಳ ವಿರುದ್ಧ ಜನಜಾಗೃತಿ ಮೂಡಿಸುವ ಸಲುವಾಗಿ ನಾಲ್ಕೈದು ವಿದ್ಯಾರ್ಥಿ- ವಿದ್ಯಾರ್ಥಿನಿಗಳಿರುವ 9 ಗುಂಪುಗಳಾಗಿ ಮನೆಮನೆಗೆ ತೆರಳಿ ಜಾಗೃತಿ ಮೂಡಿಸಲು ಪ್ರಯತ್ನಿಸಿದರು.

ಎಸ್ಕೆಎಸ್‌ಬಿವಿ ಅಧ್ಯಕ್ಷ ಮುಹಮ್ಮದ್ ಮುಫೀಝ್, ಕಾರ್ಯದರ್ಶಿ ಮುಹಮ್ಮದ್ ಇಝಾನ್, ಕೋಶಾಧಿಕಾರಿ ಅಬ್ದುಲ್ ಸಮದ್, ಮದ್ರಸ ಉಸ್ತುವಾರಿ ಅಹ್ಮದುಲ್ ಕಬೀರ್ ಮತ್ತಿತರರು ನೇತೃತ್ವ ನೀಡಿದ್ದರು.

ಮಗ್ರಿಬ್ ನಮಾಜಿನ ಬಳಿಕ ಮಜ್ಲಿಸುನ್ನೂರ್ ಕಾರ್ಯಕ್ರಮವು ಸ್ಥಳೀಯ ಖತೀಬ್ ಉಸ್ಮಾನ್ ರಾಝಿ ಬಾಖವಿ ಅಲ್ ಹೈತಮಿಯ ನೇತೃತ್ವದಲ್ಲಿ ನಡೆಯಿತು. ಸದರ್ ಮುಅಲ್ಲಿಂ ಮುಹಮ್ಮದ್ ನಝೀರ್ ವೌಲವಿ ಕಾರ್ಯಕ್ರಮದ ಮೇಲುಸ್ತುವಾರಿ ವಹಿಸಿದ್ದರು.

ಜಮಾಅತ್ ಕಮಿಟಿಯ ಜೊತೆ ಕಾರ್ಯದರ್ಶಿ ಸಿದ್ದೀಕ್ ಟಿವಿಎಸ್, ಮುಅಲ್ಲಿಮರಾದ ದಾವುದ್ ಸಅದಿ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News