ರಾಜ್ಯಮಟ್ಟದ ವಿಟಿಯು ಈಜು ಸ್ಪರ್ಧೆ: ಸಹ್ಯಾದ್ರಿ ಕಾಲೇಜಿನ ಮೈತ್ರಿಗೆ ಚಿನ್ನದ ಪದಕ

Update: 2019-09-23 16:00 GMT

ಮಂಗಳೂರು, ಸೆ.23: ಬೆಂಗಳೂರಿನ ಎಂ.ಎಸ್. ರಾಮಯ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ವಿಟಿಯು ರಾಜ್ಯಮಟ್ಟದ ಈಜು ಸ್ಪರ್ಧೆಯಲ್ಲಿ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ನ ಎಂಬಿಎ ವಿದ್ಯಾರ್ಥಿನಿ ಮೈತ್ರಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ.

ವಿಟಿಯು ರಾಜ್ಯಮಟ್ಟದ 200 ಮೀಟರ್ ಬಟರ್ ಫ್ಲೈ ಈಜು ಸ್ಪರ್ಧೆಯಲ್ಲಿ ಚಿನ್ನದ ಪದಕ ಮತ್ತು 100 ಮೀಟರ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News