×
Ad

ಕೇದಾರನಾಥ್: ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ

Update: 2019-09-23 22:12 IST

ಪ್ರಯಾಣಿಕರು ಪಾರು ಡೆಹ್ರಾಡೂನ್, ಸೆ.23: ಕೇದಾರನಾಥ ಕ್ಷೇತ್ರ ಸಂದರ್ಶಿಸಿ ವಾಪಸಾಗುತ್ತಿದ್ದ ಆರು ಯಾತ್ರಿಗಳು ಪ್ರಯಾಣಿಸುತ್ತಿದ್ದ ಖಾಸಗಿ ಹೆಲಿಕಾಪ್ಟರ್ ತಾಂತ್ರಿಕ ದೋಷದ ಕಾರಣ ಕೇದಾರನಾಥದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಘಟನೆ ಸೋಮವಾರ ನಡೆದಿದೆ.

ಹೆಲಿಕಾಪ್ಟರ್‌ನಲ್ಲಿದ್ದವರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೇದಾರನಾಥದಿಂದ ಫತಾ ಎಂಬಲ್ಲಿಗೆ ಸಂಚರಿಸುತ್ತಿದ್ದ ಹೆಲಿಕಾಪ್ಟರ್ ಆಗಸಕ್ಕೆ ನೆಗೆದೊಡನೆ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಪೈಲಟ್ ತುರ್ತು ಭೂಸ್ಪರ್ಷ ಮಾಡಿದ್ದು ಈ ಸಂದರ್ಭ ಹೆಲಿಕಾಪ್ಟರ್‌ನ ಹಿಂಬದಿ ಹೆಲಿಪ್ಯಾಡ್‌ನ ಕಂಬಿಬೇಲಿಗೆ ಬಡಿದಿದೆ.

 ಆದರೆ ಪೈಲಟ್ ಸಹಿತ ವಿಮಾನದಲ್ಲಿದ್ದ ಏಳು ಮಂದಿ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ ಎಂದು ರುದ್ರಪ್ರಯಾಗ ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ಹರೀಶ್‌ಚಂದ್ರ ಶರ್ಮ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News