×
Ad

ಬುಡೋಳಿ: ಹೆದ್ದಾರಿ ಬದಿಯ ಕಮರಿಗೆ ಮಗುಚಿದ ಟ್ಯಾಂಕರ್; ಚಾಲಕನಿಗೆ ಗಾಯ

Update: 2019-09-23 22:21 IST

ಬಂಟ್ವಾಳ, ಸೆ. 23: ಚಾಲಕನ ನಿಯಂತ್ರಣ ತಪ್ಪಿದ ಗ್ಯಾಸ್ ಟ್ಯಾಂಕರ್ ವೊಂದು ರಸ್ತೆ ಬದಿಯ ಕಮರಿಗೆ ಮಗುಚಿದ ಪರಿಣಾಮ ಟ್ಯಾಂಕರ್ ಚಾಲಕ ಗಾಯಗೊಂಡ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ ಸಮೀಪದ ಬುಡೋಳಿ ಎಂಬಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ.

ಘಟನೆಯಿಂದ ಗ್ಯಾಸ್ ಟ್ಯಾಂಕರ್ ಚಾಲಕ, ತಮಿಳುನಾಡು ಮೂಲದ ರಾಜ ಎಂಬವರಿಗೆ ಗಾಯವಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಘಟನೆ: ಗ್ಯಾಸ್ ತುಂಬಿಸಲೆಂದು ಬೆಂಗಳೂರಿನಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಟ್ಯಾಂಕರ್ ಮಾಣಿಯ ಬುಡೋಳಿ ಸಮೀಪ ಬಸ್ ವೊಂದಕ್ಕೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸುವ ಭರದಲ್ಲಿ  ಚಾಲಕ ನಿಯಂತ್ರಣ ಕಳೆದು ಟ್ಯಾಂಕರ್ ಹೆದ್ದಾರಿ ಬದಿಯ ಕಮರಿಗೆ ಮಗುಚಿ ಈ ಅವಘಡ ಸಂಭವಿಸಿದೆ. ಪರಿಣಾಮ ಚಾಲಕನಿಗೆ ಗಾಯಗಳಾಗಿವೆ.

ಘಟನೆಯ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News