ಸುರತ್ಕಲ್ ಹೋಬಳಿ ಮಟ್ಟದ ಪ್ರೌಢಶಾಲಾ ವಿಭಾಗದ ಕ್ರೀಡಾಕೂಟ

Update: 2019-09-23 17:01 GMT

ಮಂಗಳೂರು, ಸೆ.23: ವಿದ್ಯಾರ್ಥಿಗಳು ತಮ್ಮ ಕ್ರೀಡಾ ಪ್ರತಿಭೆಯನ್ನು ಅನಾವರಣಗೊಳಿಸಲು ಕ್ರೀಡಾಕೂಟಗಳು ಸಹಕಾರಿಯಾಗಲಿವೆ ಎಂದು ನೂರುಲ್ ಹುದಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬದ್ರುದ್ದೀನ್ ತಿಳಿಸಿದ್ದಾರೆ.

ದ.ಕ. ಜಿಪಂ ಸಾರ್ವಜನಿಕ ಶಿಕ್ಷಣ ಇಲಾಖೆ, ಉತ್ತರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಹಾಗೂ ಕೃಷ್ಣಾಪುರದ 4ನೇ ವಿಭಾಗದ ಚೈತನ್ಯ ಪಬ್ಲಿಕ್ ಪ್ರೌಢಶಾಲೆಗಳ ಸಂಯುಕ್ತಾಶ್ರಯದಲ್ಲಿ ಸುರತ್ಕಲ್‌ನ ಎನ್‌ಐಟಿಕೆ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಸುರತ್ಕಲ್ ಹೋಬಳಿ ಮಟ್ಟದ ಪ್ರೌಢಶಾಲಾ ವಿಭಾಗದ ಕ್ರೀಡಾಕೂಟದಲ್ಲಿ ಕ್ರೀಡಾಜ್ಯೋತಿ ಸ್ವೀಕರಿಸಿ ಅವರು ಮಾತನಾಡಿದರು.

ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗದ ಮುಖ್ಯಸ್ಥ ಪ್ರೊ.ಜಗನ್ನಾಥ ನಾಯಕ್ ಕ್ರೀಡಾಕೂಟ ಉದ್ಘಾಟಿಸಿದರು. ಕ್ರೀಡಾಕೂಟದ ಅಧ್ಯಕ್ಷತೆಯನ್ನು ಚೈತನ್ಯ ಪಬ್ಲಿಕ್ ಶಾಲೆಯ ಗೌರವ ಸಲಹೆಗಾರ, ‘ಇಸ್ಯೂ ಆ್ಯಂಡ್ ಕನ್ಸರ್ನ್’ ಇದರ ಸಂಪಾದಕ ಜಯರಾಮ್ ಶ್ರೀಯಾನ್ ವಹಿಸಿದ್ದರು.

ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಕಾರ್ಪೊರೇಟರ್ ತಿಲಕ್‌ರಾಜ್ ಕೃಷ್ಣಾಪುರ ವಂದನೆ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಮಂಗಳೂರು ಉತ್ತರ ವಲಯದ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಆಶಾ ನಾಯಕ್, ಚೈತನ್ಯ ಪಬ್ಲಿಕ್ ಶಾಲೆಯ ಗೌರವಾಧ್ಯಕ್ಷ ಹಾಜಿ ಬಿ.ಎಂ.ಹುಸೈನ್, ಅಧ್ಯಕ್ಷ ಕೆ.ಎ. ಖಾದರ್, ಸಂಚಾಲಕ ಎಂ.ಎ.ಹನೀಫ್, ಕಾರ್ಯದರ್ಶಿ ಶೇಖ್ ಅಹ್ಮದ್ ಮತ್ತು ಕಾಟಿಪಳ್ಳ ಕ್ಲಸ್ಟರ್‌ನ ಸಿಆರ್‌ಪಿ ಐರಿನ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಶಶಿಕಲಾ ಸ್ವಾಗತಿಸಿದರು. ಸಹಶಿಕ್ಷಕಿ ರೇವತಿ ಹೊಳ್ಳ ವಂದಿಸಿದರು. ಕಸ್ತೂರಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News