ತೈಲ ಬೆಲೆ ಗಗನಕ್ಕೆ: ಸಭಾಪತಿ ಖಂಡನೆ

Update: 2019-09-23 17:44 GMT

ಉಡುಪಿ, ಸೆ.23. ಪೆಟ್ರೋಲ್ ಮತ್ತು ಡೀಸೆಲ್ ದರ ಅನಿಯಂತ್ರಿತವಾಗಿ ಏರಿಕೆ ಕಾಣುತ್ತಿದ್ದು ದರ ನಿಯಂತ್ರಣಕ್ಕೆ ಕೇಂದ್ರ ಸರಕಾರ ವಿಫಲವಾಗಿದೆ ಎಂದು ಮಾಜಿ ಶಾಕ ಯು.ಆರ್. ಸಭಾಪತಿ ಟೀಕಿಸಿದ್ದಾರೆ.

ಇಂದು ಒಂದೇ ದಿನ ಪೆಟ್ರೋಲ್ ದರ ಲೀ.ಗೆ 1.59 ಪೈಸೆ ಏರಿಕೆ ಕಂಡು ಒಟ್ಟು 76.39 ರೂ. ಆಗಿದೆ. ಕಳೆದ 10 ದಿನಗಳಲ್ಲಿ 7 ಬಾರಿ ಏರಿಕೆಯಾಗಿದ್ದು ತಿಂಗಳ ಸರಾಸರಿ 3.27ರಷ್ಟು ಏರಿಕೆ ಕಂಡಿದೆ. ಇನ್ನು ಡೀಸೆಲ್ ದರವೂ ಲೀ.ಗೆ 68.60 ರೂ. ತಲುಪಿದ್ದು ಕಳೆದ 10 ದಿನಗಳಲ್ಲಿ 7 ಬಾರಿ ಏರಿಕೆ ಕಂಡಿದೆ ಎಂದು ಸಭಾಪತಿ ಹೇಳಿದ್ದಾರೆ.

ಇಷ್ಟೇ ಅಲ್ಲದೆ, ಕಳೆದ 10 ದಿನಗಳಲ್ಲಿ ಎಲ್ಪಿಜಿ ದರ 8 ಬಾರಿ ಮತ್ತು ಅಟೋಗ್ಯಾಸ್ ದರವೂ ಐದು ಬಾರಿ ಏರಿಕೆಯಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ದರ ಈ ಪರಿ ಏರುತ್ತಿರುವುದು ದಿನನಿತ್ಯದ ವಸ್ತುಗಳ ಬೆಲೆ ಏರಿಕೆಗೂ ಕಾರಣವಾಗಲಿದೆ ಎಂದು ಸಭಾಪತಿ ಆತಂಕ ವ್ಯಕ್ತಪಡಿಸಿದ್ದಾರೆ.

2014ರಲ್ಲಿ ಯುಪಿಎ ಸರಕಾರದ ಅವಧಿಯಲ್ಲಿ ಕಚ್ಛಾ ತೈಲ ಬೆಲೆ ಬ್ಯಾರಲ್ಲಿಗೆ 120 ಡಾಲರ್ ತಲುಪಿದಾಗಲೂ ಒಂದು ಲೀ. ಪೆಟ್ರೋಲ್ 56 ರೂ.ಗೆ ಸಿಗುವಂತೆ ಮಾಡಲಾಗಿತ್ತು. ಆದರೆ ಇಂದು 64 ಡಾಲರ್ ಇದ್ದರೂ ಪೆಟ್ರೋಲ್ ಬೆಲೆ 77 ರೂ. ತಲುಪಿದೆ. ಅಲ್ಲದೇ ಯುಪಿಎ ಸರಕಾರ 5.17 ಲಕ್ಷ ಕೋಟಿ ರೂ. ಸಬ್ಸಿಡಿ ನೀಡುವ ಮೂಲಕ ಜನಸಾಮಾನ್ಯರಿಗೆ ಹೊರೆಯಾಗದಂತೆ ಮಾಡಿ್ತು ಎಂದು ಸಭಾಪತಿ ನೆನಪಿಸಿದ್ದಾರೆ.

ಈಗಾಗಲೇ ದೇಶದ ಆರ್ಥಿಕ ಸ್ಥಿತಿ ಪಾತಾಳ ತಲುಪಿದ್ದು, ಇಂದನ ಬೆಲೆ ಏರಿಕೆ ಪರಿಣಾಮ ಜನಸಾಮಾನ್ಯರ ಜೀವನ ದುಸ್ತರವಾಗಲಿದೆ ಎಂದು ಸಭಾಪತಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News