ಸೊರ್ನಾಡು ಹಾ.ಉ.ಸ. ಸಂಘದಿಂದ ಹಾಲು ನಿರಾಕರಣೆ: ಆರೋಪ

Update: 2019-09-23 17:58 GMT

ಬಂಟ್ವಾಳ, ಸೆ. 23: ಸೊರ್ನಾಡು ಹಾಲು ಉತ್ಪಾದಕರ ಸಹಕಾರ ಸಂಘವು ಇಂದು ತನ್ನ ಹಾಲನ್ನು ನಿರಾಕರಿಸಿದೆ ಎಂದು ಪಂಜಿಕಲ್ಲು ನಿವಾಸಿ, ಹೈನುಗಾರ  ಡೊನಾಲ್ಡ್ ಪಿಂಟೋ ಆರೋಪಿಸಿದ್ದಾರೆ.

ಅವರು ಬಿ.ಸಿ.ರೋಡಿನ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ತಾನು ಕಳೆದ 2 ವರ್ಷಗಳಿಂದ ಸೊರ್ನಾಡು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಹಾಲು ಪೂರೈಸುತ್ತಾ ಬಂದಿದ್ದೇನೆ. ಆದರೆ, ತನಗೆ 2 ವರ್ಷಗಳಿಂದ ವಾರ್ಷಿಕ ಲಾಭಾಂಶ ನೀಡದೇ ಹಾಗೂ ಸದಸ್ಯತ್ವ ನೀಡದೇ ಸತಾಯಿಸುತ್ತಿದ್ದಾರೆ. ಈ ವಿಚಾರವಾಗಿ ಸೆ. 22ರಂದು ಸಂಘದ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಈ ಕಾರಣಕ್ಕಾಗಿ ಇಂದು ಸೊರ್ನಾಡು ಹಾಲು ಉತ್ಪಾದಕರ ಸಹಕಾರ ಸಂಘವು ತನ್ನ ಹಾಲನ್ನು ನಿರಾಕರಿಸಿದ್ದು, ಇದರಿಂದ ಅತ್ಯಧಿಕ ನಷ್ಟ ಸಂಭವಿಸಿದೆ ಎಂದು ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಭಾಸ್ಕರ, ಪುರುಷೋತ್ತಮ, ಲಿಲ್ಲಿ ಮೇರಿ ರೋಡ್ರಿಗಸ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News