ಮಿನಿ ವಿಧಾನ ಹೊರಭಾಗದಲ್ಲಿ ಸಿಸಿ ಕ್ಯಾಮರಾ, ಪೊಲೀಸ್ ಗಸ್ತು: ಎ.ಸಿ.ಕೃಷ್ಣಮೂರ್ತಿ

Update: 2019-09-23 18:07 GMT

ಪುತ್ತೂರು; ಪುತ್ತೂರು ಮಿನಿವಿಧಾನಸೌಧದ ಸುತ್ತ ರಾತ್ರಿಹೊತ್ತು ಕೆಲವೊಂದು ದುವ್ರ್ಯಸನದ ವ್ಯಕ್ತಿಗಳ ತಾಣವಾಗುತ್ತಿರುವುದು ಗಮನಕ್ಕೆ ಬಂದ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆ ವತಿಯಿಂದ ರಾತ್ರಿ ಗಸ್ತು ಮತ್ತು ಕಾವಲುಗಾರಿಕೆ ವ್ಯವಸ್ಥೆ ಕೈಗೊಳ್ಳಲಾಗುವುದು ಎಂದು ಪುತ್ತೂರು ಉಪವಿಭಾಗದ ಹಿರಿಯ ಉಪವಿಭಾಗಾಧಿಕಾರಿ ಎಚ್.ಕೆ. ಕೃಷ್ಣಮೂರ್ತಿ ತಿಳಿಸಿದರು.

ಪತ್ರಕರ್ತರೊಂದಿಗೆ ಸೋಮವಾರ ಮಾತನಾಡಿದ ಅವರು ಮಿನಿ ವಿಧಾನಸೌಧ ಪ್ರದೇಶ ತಪ್ಪಿಸಲು ಭದ್ರತಾ ಕ್ರಮದ ಬಗ್ಗೆ ಚಿಂತನೆ ನಡೆಸಲಾಗಿದೆ. ಈ ಪ್ರದೇಶದಲ್ಲಿ ಮದ್ಯ ಸೇವನೆ ಹಾಗೂ ಇನ್ನಿತರ ಚಟುವಟಿಕೆ ನಡೆಯುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇದನ್ನು ತಡೆಯಲು ಪೊಲೀಸ್ ಕಾವಲು ಹಾಕಲಾಗುವುದು ಎಂದು ತಿಳಿಸಿದರು.

ಮಿನಿವಿಧಾನಸೌಧದ ವಿವಿಧ ಕಚೇರಿಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆಯಾಗಿದ್ದು, ಇದರಲ್ಲಿ ಕೆಲವು ಸಿಸಿ ಕ್ಯಾಮರಾ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ಹಾಗಾಗಿ ಈಗ ಅಳವಡಿಸಿರುವ ಸಿಸಿ ಕ್ಯಾಮರಾ ಗಳ ಜತೆ ಮಿನಿವಿಧಾನಸೌಧದ ಹೊರಭಾಗದಲ್ಲಿಯೂ ಸಿಸಿಕ್ಯಾಮರಾ ಅಳವಡಿಕೆ ನಡೆಸಲಾಗುವುದು ಎಂದು ಅವರು ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News