×
Ad

ಸೌದಿ ತೈಲ ಸ್ಥಾವರಗಳ ಮೇಲಿನ ದಾಳಿಯ ಹಿಂದೆ ಇರಾನ್: ಬೊರಿಸ್ ಜಾನ್ಸನ್

Update: 2019-09-23 23:38 IST

ಲಂಡನ್, ಸೆ. 23: ಸೌದಿ ಅರೇಬಿಯದ ತೈಲ ಸ್ಥಾವರಗಳ ಮೇಲೆ ನಡೆದ ದಾಳಿಯ ಹಿಂದೆ ಇರಾನ್ ಇದೆ ಎಂದು ಬ್ರಿಟನ್ ಪ್ರಧಾನಿ ಬೊರಿಸ್ ಜಾನ್ಸನ್ ಆರೋಪಿಸಿದ್ದಾರೆ.

ಅವರು ನ್ಯೂಯಾರ್ಕ್‌ಗೆ ಪ್ರಯಾಣಿಸುತ್ತಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ನ್ಯೂಯಾರ್ಕ್‌ನಲ್ಲಿ ಅವರು ಇರಾನ್ ಅಧ್ಯಕ್ಷ ಹಸನ್ ರೂಹಾನಿಯನ್ನು ಭೇಟಿಯಾಗಲಿದ್ದಾರೆ.

‘‘ಸೌದಿ ಅರೇಬಿಯದ ಅರಾಮ್ಕ ತೈಲ ಸ್ಥಾವರಗಳ ಮೇಲಿನ ಆಕ್ರಮಣಗಳ ಹಿಂದೆ ಇರಾನ್ ಕೈವಾಡ ಇರುವ ಸಾಧ್ಯತೆ ದಟ್ಟವಾಗಿದೆ ಎಂದು ನಾನು ನಿಮಗೆ ಹೇಳಬಲ್ಲೆ’’ ಎಂದು ಬೊರಿಸ್ ಜಾನ್ಸನ್ ಹೇಳಿರುವುದಾಗಿ ಬ್ರಿಟನ್ ಪ್ರೆಸ್ ಅಸೋಸಿಯೇಶನ್ ಸುದ್ದಿ ಸಂಸ್ಥೆ ಸೋಮವಾರ ವರದಿ ಮಾಡಿದೆ.

ಸೆಪ್ಟಂಬರ್ 14ರಂದು ನಡೆದ ಡ್ರೋನ್ ದಾಳಿಗಳಿಗೆ ಸೌದಿ ಅರೇಬಿಯ ಮತ್ತು ಅಮೆರಿಕ ಈಗಾಗಲೇ ಇರಾನನ್ನು ಜವಾಬ್ದಾರಿಯಾಗಿಸಿವೆ.

ಫ್ರಾನ್ಸ್ ಅಧ್ಯಕ್ಷ ಇಮಾನುಯೆಲ್ ಮ್ಯಾಕ್ರೋನ್ ಮತ್ತು ಜರ್ಮನ್ ಚಾನ್ಸಲರ್ ಆ್ಯಂಜೆಲಾ ಮರ್ಕೆಲ್ ಜೊತೆಗೆ ನಡೆಯುವ ಸಭೆಯಲ್ಲೂ ಬ್ರಿಟನ್ ಪ್ರಧಾನಿ ದಾಳಿಗಳ ಬಗ್ಗೆ ಚರ್ಚಿಸಲಿದ್ದಾರೆ.

‘‘ಡ್ರೋನ್ ಮತ್ತು ಕ್ರೂಸ್ ಕ್ಷಿಪಣಿಗಳನ್ನು ನಿಜವಾಗಿಯೂ ಬಳಸಿರುವುದು ಇರಾನ್ ಎಂದು ನಾವು ಭಾವಿಸಿದ್ದೇವೆ’’ ಎಂದು ಜಾನ್ಸನ್ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News