2.23 ಕೋಟಿ ಲಾಭವನ್ನು ದಾಖಲಿಸಿದ ಮಾರುತಿ ಪತ್ತಿನ ಸಂಘ

Update: 2019-09-23 18:10 GMT

ಭಟ್ಕಳ: ಶ್ರೀ ಮಾರುತಿ ಸಹಕಾರಿ ಪತ್ತಿನ ಸಂಘದ 20 ನೇ ವಾರ್ಷಿಕ ಮಹಾ ಸಭೆಯು ಶಿರಾಲಿಯ ಶ್ರೀ ಮಾರುತಿ ದೇವಸ್ಥಾನದ ಸಭಾಗೃಹದಲ್ಲಿ ಸೋಮವಾರ ನಡೆಯಿತು. ಸಂಘದ ಅಧ್ಯಕ್ಷ ಅಶೋಕ ಪೈ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಸಂಘವು ಪ್ರಸಕ್ತ ಸಾಲಿನಲ್ಲಿ 57.37 ಕೋಟಿಗೂ ಮಿಕ್ಕಿ ಠೇವಣಿ ಸಂಗ್ರಹಿಸಿದ್ದು, ಸದಸ್ಯರಿಗೆ ರೂ. 57 ಕೋಟಿ ಸಾಲವನ್ನು ನೀಡಿ 98.80% ಸಾಲ ವಸೂಲಾತಿಯೊಂದಿಗೆ ಸುಮಾರು 2.23 ಕೋಟಿಗೂ ಮಿಕ್ಕಿ ಲಾಭ ಗಳಿಸಿ ಸುಧೃಢವಾಗಿದೆ ಎಂದ ಅವರು ಸದಸ್ಯರಿಗೆ 13% ಲಾಭಾಂಶ ಘೋಷಿಸಿದರು. 

ಸಂಘದ ಲೆಕ್ಕ ಪರಿಶೋಧನಾ ವರದಿಯಲ್ಲಿ ಸತತ 8 ವರ್ಷಗಳಿಂದ “ಎ”ದರ್ಜೆ ಪಡೆಯಲು ಸದಸ್ಯರ ಉತ್ತಮ ಸಹಕಾರ ಹಾಗೂ ಆಡಳಿತ ಮಂಡಳಿಯ ಏಕತಾ ಮನೋಭಾವವೇ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು.

ಹಿರಿಯ ನಿರ್ದೇಶಕ ಸುಬ್ರಾಯ ಕಾಮತ್ ಸಾಂದರ್ಭಿಕವಾಗಿ ಮಾತನಾಡಿ, ಸಂಘವು ಮತ್ತಷ್ಟು ಪ್ರಗತಿಯನ್ನು ಸಾಧಿಸಲು ಸದಸ್ಯರ ಸಹಕಾರ ಅಗತ್ಯ ಎಂದು ಅಭಿಪ್ರಾಯಪಟ್ಟರು. ಮುಖ್ಯ ಕಾರ್ಯನಿರ್ವಾಹಕರಾದ ರಾಜೇಂದ್ರ ಶ್ಯಾನಭಾಗರವರು ವರದಿಯನ್ನು ವಾಚಿಸಿದರು. 

ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿ.ಯು.ಸಿ ಯಲ್ಲಿ ಗರಿಷ್ಠ ಅಂಕ ಪಡೆದ ಭಟ್ಕಳ, ಹೊನ್ನಾವರ ಮತ್ತು ಕುಮಟಾ ತಾಲೂಕಿನ 25 ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರವನ್ನು ನೀಡಿ ಗೌರವಿಸಲಾಯಿತು. 

ಅಧ್ಯಕ್ಷ ಅಶೋಕ ಪೈ ಮಾತನಾಡುತ್ತಾ ಕುಮಟಾ ಶಾಖೆಯ ವ್ಯವಸ್ಥಾಪಕ ಪ್ರಸನ್ನ ಪ್ರಭು ಸುಮಾರು 16 ಕೋಟಿ ಸಾಲವನ್ನು ನೀಡಿ 37 ಲಕ್ಷಕ್ಕೂ ಮಿಕ್ಕಿ ಲಾಭಗಳಿಸಿದ್ದಾರೆ. ಸತತ 5 ವರ್ಷಗಳಿಂದ 100%  ಸಾಲವಸೂಲಾತಿ ಮಾಡಿ ಕುಮಟಾದಲ್ಲಿ ಸ್ವಂತ ಕಟ್ಟಡದ ನಿರ್ಮಾಣದ ರೂವಾರಿಗಳಾಗಿದ್ದಾರೆ. ಅವರ ಈ ಉತ್ತಮ ಸಾಧನೆಯು ನಮ್ಮ ಸಂಘಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದು ಅವರಿಗೆ ಚಿನ್ನದ ಉಂಗುರವನ್ನು ತೊಡಿಸಿ ಸನ್ಮಾನಿಸಿದರು. 

ಪ್ರಾರಂಭದಲ್ಲಿ ಹಿರಿಯ ನಿರ್ದೇಶಕರಾದ ದಿ| ವೆಂಕಟೇಶ ಪ್ರಭು ಇವರಿಗೆ ಶೃದ್ಧಾಂಜಲಿ ಸಲ್ಲಿಸಿ ಪುಷ್ಪನಮನ ಸಲ್ಲಿಸಲಾಯಿತು. ನಿರ್ದೇಶಕರಾದ ರವಿಂದ್ರ ಪ್ರಭು ಸ್ವಾಗತಿಸಿದರೆ, ಕೊನೆಯಲ್ಲಿ ನರೇಂದ್ರ ನಾಯಕ ವಂದನಾರ್ಪಣೆಗೈದರು. ಕುಮಟಾ ಶಾಖೆಯ ಪ್ರಬಂಧಕ ಪ್ರಸನ್ನ ಪ್ರಭು ಸಭೆಯ ಕಾರ್ಯಕಲಾಪಗಳನ್ನು ನಿರ್ವಹಿಸಿದರು.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News