×
Ad

ಭೌತಶಾಸ್ತ್ರದ ಬಗ್ಗೆ ವಿಜ್ಞಾನಿಗಳಲ್ಲಿ ಅಧ್ಯಯನ ಕೊರತೆ: ಅದಮಾರುಶ್ರೀ

Update: 2019-09-24 18:46 IST

ಉಡುಪಿ, ಸೆ.24: ಭೌತಶಾಸ್ತ್ರದ ಬಗ್ಗೆ ವಿಜ್ಞಾನಿಗಳು ಇನ್ನು ಕೂಡ ಅಧ್ಯಯನ ದಲ್ಲಿದ್ದಾರೆಯೇ ಹೊರತು ಈವರೆಗೆ ಯಾವುದನ್ನು ಕೂಡ ಅಂತಿಮಗೊಳಿಸಿಲ್ಲ. ಆದುದರಿಂದ ಸಹಸ್ರಾರು ವರ್ಷಗಳ ಹಿಂದೆಯೇ ವಿಜ್ಞಾನವನ್ನು ನಿಶ್ಚಯವಾಗಿ ಹೇಳಿದ ಋಷಿಗಳ ಸನ್ನಿಧಾನವು ನಮ್ಮ ವಿಜ್ಞಾನಿಗಳಲ್ಲಿ ಬರಬೇಕಾಗಿದೆ ಎಂದು ಅದಮಾರು ಮಠಾಧೀಶ ಶ್ರೀವಿಶ್ವಪ್ರಿಯ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ವತಿಯಿಂದ ಮಂಗಳವಾರ ಕಾಲೇಜಿನ ಮಿನಿ ಸಭಾಂಗಣದಲ್ಲಿ ಆಯೋಜಿಸಲಾದ ದ.ಕ. ಮತ್ತು ಉಡುಪಿ ಜಿಲ್ಲೆಯ ಶಿಕ್ಷಕರಿಗೆ ಖಗೋಳ ವಿಜ್ಞಾನ ಮತ್ತು ಗ್ರಹಣಗಳ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

21ನೆ ಶತಮಾನವಲ್ಲ, 70ನೆ ಶತಮಾನಕ್ಕೆ ಕಾಲಿಟ್ಟರು ಕೂಡ ಪ್ರತಿಯೊಂದು ಕೆಲಸ ಹಿಂದೆ ನಾನು ಇದ್ದೇನೆ ಎಂಬ ಪ್ರಜ್ಞೆ ಬರುವಂತೆ ದೇವರು ಮಾಡುತ್ತಿ ದ್ದಾನೆ. ಹೀಗಾಗಿ ಚಂದ್ರಯಾನ-2 ಎರಡು ಕಿ.ಮೀ. ಇರುವಾಗ ನಿಯಂತ್ರಣ ಕಳೆದುಕೊಂಡಿತ್ತು. ವಿಜ್ಞಾನಿಗಳು ಯಾವಾಗ ಗೊತ್ತಿಲ್ಲ ಎಂದು ಕೈಚೆಲ್ಲುತ್ತಾರೋ ಆಗ ವೇದಾಂತ ಆರಂಭವಾಗುತ್ತದೆ ಎಂದರು.

ನಮ್ಮ ವಿಜ್ಞಾನಿಗಳು ಅರ್ಧ ಜ್ಞಾನಿಗಳಾಗಿದ್ದಾರೆ. ಬರೀ ಕಣ್ಣಲ್ಲಿ ಗ್ರಹಣ ನೋಡಬಾರದು ಎಂದು ಋಷಿಗಳು ಅಂದೇ ಹೇಳಿದರೆ, ಗ್ರಹಣ ನೋಡಿ ಕಣ್ಣು ಹಾಳಾದ ನಂತರ ವಿಜ್ಞಾನಿಗಳು ಬರೀ ಕಣ್ಣಲ್ಲಿ ಗ್ರಹಣ ನೋಡಬಾರದು ಎಂದು ತೀರ್ಮಾನ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

 ಉಡುಪಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶೇಷಶಯನ ಕಾರಿಂಜ ಮಾತನಾಡಿ, ಪ್ರಕೃತಿಯನ್ನು ಅರಿಯುವುದೇ ವಿಜ್ಞಾನ. ನಾವು ಈವರೆಗೆ ಪ್ರಕೃತಿಯನ್ನು ಶೇ.1ರಷ್ಟು ಮಾತ್ರ ಅರಿತಿದ್ದೇವೆ. ಆದುದರಿಂದ ಬಹಳ ವಿಸ್ತಾರವಾದ ವಿಜ್ಞಾನ ಕ್ಷೇತ್ರದಲ್ಲಿ ಮಕ್ಕಳಿಗೆ ಆಸಕ್ತಿ ಮೂಡಿಸುವ ಕಾರ್ಯ ಮಾಡಬೇಕು. ಸುರಕ್ಷಿತ ವಿಧಾನದಲ್ಲಿ ಮಕ್ಕಳಿಗೆ ಆಕಾಶ ವೀಕ್ಷಣೆಯನ್ನು ಹೇಳಿ ಕೊಡಬೇಕು ಎಂದರು.

ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ರಾಘವೇಂದ್ರ ಎ. ವಹಿಸಿ ದ್ದರು. ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರತಿಭಾ ಸಿ.ಆಚಾರ್ಯ ಸ್ವಾಗತಿಸಿದರು. ಕಾರ್ಯಾಗಾರದ ಸಂಯೋಜಕ ಅತುಲ್ ಭಟ್ ವಂದಿಸಿದರು. ವಿದ್ಯಾರ್ಥಿನಿ ಸ್ವಾತಿ ಕಾರ್ಯಕ್ರಮ ನಿರೂಪಿಸಿದರು.

ಸೂರ್ಯಗ್ರಹ ವೀಕ್ಷಣೆಗೆ ವಿಶೇಷ ಉಪಕರಣ

ಹವ್ಯಾಸಿ ಖಗೋಳ ವಿಜ್ಞಾನಿ ಸಾಲಿಗ್ರಾಮ ವೆಂಕಟರಮಣ ಉಪಾಧ್ಯಾಯ ತಯಾರಿಸಿರುವ ಅತ್ಯಂತ ಸರಳವಾದ ಸೂಜಿ ರಂಧ್ರ ಬಿಂಬಗ್ರಾಹಕ ಉಪ ಕರಣದ ಮೂಲಕ ಸೂರ್ಯಗ್ರಹಣವನ್ನು ತುಂಬಾ ಸ್ಪಷ್ಟವಾಗಿ ವೀಕ್ಷಿಸಬಹು ದಾಗಿದೆ.

ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘದ ವತಿಯಿಂದ ಸಾಲಿ ಗ್ರಾಮ ವೆಂಕಟರಮಣ ಉಪಾಧ್ಯಾಯರಿಂದ ಇಂತಹ ಒಟ್ಟು 275 ಉಪಕರಣ ಗಳನ್ನು ತಯಾರಿಸಿ ಪಡೆದುಕೊಳ್ಳಲಾಗಿದ್ದು, ಇದನ್ನು ಆಸಕ್ತ ಶಾಲೆಗಳಿಗೆ ವಿತರಿಸಿ ಮಕ್ಕಳಿಗೆ ಸೂರ್ಯಗ್ರಹಣವನ್ನು ತೋರಿಸುವಂತೆ ತಿಳಿಸಲಾಗಿದೆ.

ಕನ್ನಡಿ. ಅಲ್ಯುಮಿನಿಯಂ ಶೀಟುಗಳಿಂದ ತಯಾರಿಸಿರುವ ಈ ಉಪಕರಣ ದಲ್ಲಿ 15ಮೀ.ಮೀ., 5ಮೀ.ಮೀ., 2ಮೀ.ಮೀ.ನ ಮೂರು ರಂಧ್ರಗಳಿದ್ದು, ಕನ್ನಡಿಯ ಮೂಲಕ ಸೂರ್ಯನ ಪ್ರತಿಬಿಂಬವನ್ನು ಹಾಯಿಸಿ ಸೂರ್ಯಗ್ರಹಣ ವನ್ನು ಸ್ಪಷ್ಟವಾಗಿ ವೀಕ್ಷಿಸಬಹುದಾಗಿದೆ. ಅಲ್ಲದೆ ಪ್ರತಿ 11ವರ್ಷಗಳಿಗೊಮ್ಮೆ ಸೂರ್ಯನ ಕಲೆಗಳಲ್ಲಿ ಆಗುವ ವ್ಯತ್ಯಾಸವನ್ನು ಕೂಡ ನೋಡಬಹುದಾಗಿದೆ ಎಂದು ಸಂಘದ ಸ್ಥಾಪಕ ಸಂಯೋಜಕ ಡಾ.ಎ.ಪಿ.ಭಟ್ ತಿಳಿಸಿದ್ದಾರೆ.

ಅದೇ ರೀತಿ ಸೂರ್ಯಗ್ರಹಣ ವೀಕ್ಷಣೆ ಸುಲಭವಾಗಿ ವೀಕ್ಷಿಸಲು ಅನುಕೂಲ ವಾಗುವ ನಿಟ್ಟಿನಲ್ಲಿ ಕಾಲೇಜಿನ ವಿದ್ಯಾರ್ಥಿಗಳೇ ಬಾಲ್ ಕನ್ನಡಿ ಹಾಗೂ ಕನ್ನಡಕ ವನ್ನು ತಯಾರಿಸಿದ್ದಾರೆ. ಇವುಗಳನ್ನು ಕೂಡ ಆಸ್ತಕರಿಗೆ ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News