ಘರ್ ಘರಾಂತು ಭಾಜನಂತರಂಗ: 100ನೆ ವಾರದ ಸಂಭ್ರಮ
ಉಡುಪಿ, ಸೆ.24: ಘರ್ ಘರಾಂತು ಭಾಜನಂತರಂಗ ಎಂಬ ಶೀರ್ಷಿಕೆ ಯಡಿ ಪ್ರಾರಂಭಗೊಂಡ ಮನೆ ಮನೆಗಳಲ್ಲಿ ಪ್ರತಿ ರವಿವಾರ ಉಚಿತವಾಗಿ ನಡೆಯುವ ಹರಿನಾಮ ಸಂಕೀರ್ತನೆ 100ನೇ ವಾರ ಪೂರೈಸಿದ ಸಂಭ್ರಮದ ಧಾರ್ಮಿಕ ಸಭಾ ಕಾರ್ಯಕ್ರಮ ಉಡುಪಿ ವಳಕಾಡಿನ ಶ್ರೀಪದ್ಮಾತಿ ಸಭಾಸದನ ದಲ್ಲಿ ಜರಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಕಾಸರಗೋಡು ಚಿನ್ನ ಮಾತನಾಡಿ, ದೇವರ ಅನುಗ್ರಹ ಪಡೆಯಲು ಭಜನೆಯಿಂದ ಮಾತ್ರ ಸಾಧ್ಯ. ಈ ಕಾರ್ಯದಲ್ಲಿ ಮಕ್ಕಳನ್ನು ಸೇರಿಸಿಕೊಂಡು ಅವರಿಗೆ ತರಬೇತಿ ನೀಡುವ ಕಾರ್ಯದ ಜೊತೆಯಲ್ಲಿ ಸಮಾಜದ ಸಹಕಾರ ದಿಂದ ನಿರಂತರ ಭಜನಾ ಕಾರ್ಯ ನಡೆಯಬೇಕು ಎಂದು ಶುಭ ಹಾರೈಸಿದರು.
ಮಂಗಳೂರು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಯ ಜಂಟಿ ನಿರ್ದೇಶಕ ಗೋಕುಲ್ದಾಸ್ ನಾಯಕ್, ಉಡುಪಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಕಾಮತ್, ಚಿದಾನಂದ ಭಂಡಾರಿ ಕುಮಟಾ, ನ್ಯಾಯವಾದಿ ಲಕ್ಷ್ಮಣ ಶೆಣೈ, ಸಮಾಜ ಸೇವಕ ವಿಶ್ವನಾಥ ಶೆಣೈ, ಮುಂಡಾಶಿ ಶಾಂತಾರಾಮ್ ಪೈ, ಶಶಿಭೂಷಣ ಕಿಣಿ, ರಮೇಶ ಭಟ್ ಮುಖ್ಯ ಅತಿಥಿಗಳಾಗಿದ್ದರು.
ಈ ಸಂದರ್ಭದಲ್ಲಿ ಸಾಧಕರಿಗೆ ಗೌರವಾರ್ಪಣೆ ಮಾಡಲಾಯಿತು. ಪ್ರಥಮ್ ಕಾಮತ್ ಕಟಪಾಡಿ ಅವರ ವಿಶಿಷ್ಟ ರೀತಿಯ ಜಾದೂ ಗಮನ ಸೆಳೆಯಿತು. ಘರ್ ಘರ್ ಭಜನಾ ತಂಡದ ಸದ್ಯಸರಾದ ಜಯಂತ್ ನಾಯಕ್, ಗಣೇಶ್ ಶೆಣೈ, ರವೀಂದ್ರ ನಾಯಕ್, ಶೈಲಾ ಕಾಮತ್, ಅಚ್ಚುತ ಶೆಣೈ, ನಿತ್ಯಾನಂದ ನಾಯಕ್, ಪುರಂದರ ಕಿಣಿ, ಮೋಹನ್‌ದಾಸ್ ಕಾಮತ್ ಉಪಸ್ಥಿತರಿದ್ದರು. ಹರಿಪ್ರಸಾದ್ ಭಂಡಾರ್ಕಾರ್ ಕಾರ್ಯಕಮ ನಿರೂಪಿಸಿದರು. ದೇವದಾಸ್ ಕಾಮತ್ ವಂದಿಸಿದರು.