ದೇಶದ ಬಹುತ್ವ ನಾಶವಾದರೆ ಸರ್ವಾಧಿಕಾರಕ್ಕೆ ದಾರಿ: ಸುಧೀರ್ ಮುರೊಳ್ಳಿ

Update: 2020-02-01 05:30 GMT

ಹಿರಿಯಡ್ಕ, ಸೆ.24: ಈ ದೇಶ ಬಹು ಸಂಸ್ಕೃತಿಗಳ ನಾಡು. ಏಕ ಭಾಷೆಯನ್ನು ಹೇರುವ ಮೂಲಕ ಬಿಜೆಪಿ ದೇಶದ ಬಹುತ್ವವನ್ನು ನಾಶ ಮಾಡಲು ಹೊರಟಿದೆ. ಇದನ್ನು ಪ್ರಜ್ಞಾವಂತ ನಾಗರಿಕರು ವಿರೋಧಿಸಬೇಕಾಗಿದೆ. ದೇಶದ ಬಹುತ್ವ ನಾಶವಾದರೆ ದೇಶ ಏಕ ಸಂಸ್ಕೃತಿಯತ್ತ ಸಾಗಿ ಅದು ಸರ್ವಾಧಿಕಾರಕ್ಕೆ ಎಡೆ ಮಾಡುತ್ತದೆ. ಇದು ದೇಶಕ್ಕೆ ಅತ್ಯಂತ ಅಪಾಯಕಾರಿ ಎಂದು ಖ್ಯಾತ ನ್ಯಾಯವಾದಿ ಕೊಪ್ಪ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುಧೀರ್ ಕುಮಾರ್ ಮುರೊಳ್ಳಿ ಹೇಳಿದ್ದಾರೆ.

ಈಗ ದೇಶದಲ್ಲಿ ಕಾಂಗ್ರೆಸ್, ಜೆಡಿಎಸ್, ಕಮ್ಯುನಿಷ್ಟ್‌ನಂಥ ರಾಜಕೀಯ ಪಕ್ಷಗಳಿಗೆ ಕಷ್ಟದ ಕಾಲವಲ್ಲ, ಇಡೀ ದೇಶ ಕಷ್ಟದ ಕಾಲದಲ್ಲಿದೆ. ಈ ನೆಲ ಗಾಂಧಿ ಬಿತ್ತಿದ ಪ್ರೀತಿ, ಮಮತೆಯ ನೆಲ. ನೆಹರೂ ಪ್ರತಿಪಾದಿಸಿದ ಬಹುತ್ವದ ನೆಲ. ಮೋದಿ ಶಾ ಜೋಡಿ ಈ ನೆಲದ ಸೌಹಾರ್ದತೆಯನ್ನು ಹಾಳುಗೆಡವಲು ಈ ದೇಶದ ಜನತೆ ಖಂಡಿತಾ ಬಿಡುವುದಿಲ್ಲ. ಅಪಪ್ರಚಾರದ ಸಾಮೂಹಿಕ ಸನ್ನಿ ಯಿಂದಾಗಿ ಪಕ್ಷಕ್ಕೆ ಸದ್ಯ ಹಿನ್ನಡೆಯಾಗಿರಬಹುದು. ಆದರೆ ಇದು ಶಾಶ್ವತವೇನಲ್ಲ ಎಂದು ಅವರು ಹೇಳಿದರು.

ಈಗ ದೇಶದಲ್ಲಿ ಕಾಂಗ್ರೆಸ್, ಜೆಡಿಎಸ್, ಕಮ್ಯುನಿಷ್ಟ್‌ನಂಥ ರಾಜಕೀಯ ಪಕ್ಷಗಳಿಗೆ ಕಷ್ಟದ ಕಾಲವಲ್ಲ, ಇಡೀ ದೇಶ ಕಷ್ಟದ ಕಾಲದಲ್ಲಿದೆ. ಈ ನೆಲ ಗಾಂಧಿ ಬಿತ್ತಿದ ಪ್ರೀತಿ, ಮಮತೆಯ ನೆಲ. ನೆಹರೂ ಪ್ರತಿಪಾದಿಸಿದ ಬಹುತ್ವದ ನೆಲ. ಮೋದಿ ಶಾ ಜೋಡಿ ಈ ನೆಲದ ಸೌಹಾರ್ದತೆಯನ್ನು ಹಾಳುಗೆಡವಲು ಈ ದೇಶದ ಜನತೆ ಖಂಡಿತಾ ಬಿಡುವುದಿಲ್ಲ. ಅಪಪ್ರಚಾರದ ಸಾಮೂಹಿಕ ಸನ್ನಿ ಯಿಂದಾಗಿ ಪಕ್ಷಕ್ಕೆ ಸದ್ಯ ಹಿನ್ನಡೆಯಾಗಿರಬಹುದು. ಆದರೆ ಇದು ಶಾಶ್ವತವೇನಲ್ಲ ಎಂದು ಅವರು ಹೇಳಿದರು. ರಾಜ್ಯದ ಜನತೆ ಭೀಕರ ಪ್ರವಾಹದಿಂದ ಸಂತ್ರಸ್ಥರಾಗಿ ಎರಡು ತಿಂಗಳು ಕಳೆದರೂ, ಕೇಂದ್ರದಿಂದ ಬಿಡಿ ಕಾಸು ಬಿಡುಗಡೆಯಾಗಿಲ್ಲ. ರಾಜ್ಯದಿಂದ ಆಯ್ಕೆಯಾದ 25 ಬಿಜೆಪಿ ಎಂಪಿಗಳು, ಮೋದಿ-ಶಾರ ಕೂಲಿಯಾಳುಗಳಾಗಿ ವರ್ತಿಸುತ್ತಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಅಮಿತ್ ಶಾರನ್ನು ತಲೆ ಎತ್ತಿ ನೋಡುವ ಧೈರ್ಯವಿಲ್ಲ. ವಿಜಯಾ ಬ್ಯಾಂಕ್, ಕೆನರಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್‌ಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಅಸ್ಮಿತೆಗಳು. ಇವುಗಳನ್ನು ಬೇರೆ ಬ್ಯಾಂಕ್‌ನೊಂದಿಗೆ ವಿಲೀನ ಮಾಡುವ ಮೂಲಕ ಈ ಮಣ್ಣಿನ ಅಸ್ಮಿತೆಗಳನ್ನು ನಾಶಮಾಡಲಾಯಿತು ಎಂದು ಮುರೊಳ್ಳಿ ಆರೋಪಿಸಿದರು.

ರಾಜ್ಯದ ಜನತೆ ಭೀಕರ ಪ್ರವಾಹದಿಂದ ಸಂತ್ರಸ್ಥರಾಗಿ ಎರಡು ತಿಂಗಳು ಕಳೆದರೂ, ಕೇಂದ್ರದಿಂದ ಬಿಡಿ ಕಾಸು ಬಿಡುಗಡೆಯಾಗಿಲ್ಲ. ರಾಜ್ಯದಿಂದ ಆಯ್ಕೆಯಾದ 25 ಬಿಜೆಪಿ ಎಂಪಿಗಳು, ಮೋದಿ-ಶಾರ ಕೂಲಿಯಾಳುಗಳಾಗಿ ವರ್ತಿಸುತ್ತಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಅಮಿತ್ ಶಾರನ್ನು ತಲೆ ಎತ್ತಿ ನೋಡುವ ದೈರ್ಯವಿಲ್ಲ.ವಿಜಯಾಬ್ಯಾಂಕ್,ಕೆನರಾಬ್ಯಾಂಕ್,ಸಿಂಡಿಕೇಟ್‌ಬ್ಯಾಂಕ್‌ಗಳುಅವಿಜಿತ ದಕ್ಷಿಣ ಕನ್ನಡ ಜಿಲ್ಲೆಯ ಅಸ್ಮಿತೆಗಳು. ಇವುಗಳನ್ನು ಬೇರೆ ಬ್ಯಾಂಕ್‌ನೊಂದಿಗೆ ವಿಲೀನ ಮಾಡುವ ಮೂಲಕ ಈ ಮಣ್ಣಿನ ಅಸ್ಮಿತೆಗಳನ್ನು ನಾಶಮಾಡಲಾಯಿತು ಎಂದು ಮುರೋಳಿ ಆರೋಪಿಸಿದರು. ಪುತ್ತೂರಿನ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ, ಪ್ರಪಂಚದಲ್ಲೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದ ಪ್ರಧಾನಿಗಳು ಅಮೆರಿಕ ದಲ್ಲಿ ನಾನು ಭಾರತದಲ್ಲಿ ಶೌಚಾಲಯವನ್ನು ಕಟ್ಟಿಸಿಕೊಟ್ಟೆ ಎಂದು ಬಾಲಿಶವಾಗಿ ಭಾಷಣ ಮಾಡುತ್ತಾರೆ. ಇದು ಅವರ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿ. ನನ್ನಿಂದಲೇ ಎಲ್ಲಾ ಅನ್ನುವುದು ಸರ್ವಾಧಿಕಾರದ ಸಂಕೇತ. ವ್ಯಕ್ತಿ ಪೂಜೆ ಸರ್ವಾಧಿಕಾರಕ್ಕೆ ದಾರಿಯಾಗುತ್ತದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯದಲ್ಲಿ ಪ್ರವಾಹ ಬಂದು ಮನೆ ಮಠ ಕಳಕೊಂಡ ಸಂತ್ರಸ್ಥರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಈ ತನಕ ಯಾವುದೇ ಪರಿಹಾರ ಕ್ರಮ ಜರಗಿಲ್ಲ. ಕೇಂದ್ರದಿಂದ ಚಿಕ್ಕಾಸು ಬಿಡುಗಡೆ ಆಗಿಲ್ಲ. ಅವೈಜ್ಞಾನಿಕವಾಗಿ ಮೋಟಾರು ಕಾಯ್ದೆಯನ್ನು ಏಕಾಏಕಿ ಜಾರಿಗೊಳಿಸಿ ಬಡ ವಾಹನ ಚಾಲಕರು ಪರದಾಡುವಂತೆ ಮಾಡಿದ ಕೇಂದ್ರ ಸರಕಾರದ ಕ್ರಮ ಪ್ರಜಾಪ್ರಭುತ್ವ ವಿರೋಧಿ ಧೋರಣೆ ಎಂದರು.

ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ್‌ಕುಮಾರ್ ಕೊಡವೂರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಮಾಜಿ ಶಾಸಕ ಯು.ಆರ್. ಸಭಾಪತಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಳೆ, ಕಾಪು ಉತ್ತರ ವಲಯ ಮಹಿಳಾ ಅಧ್ಯಕ್ಷೆ ಸಂಧ್ಯಾ ಶೆಟ್ಟಿ, ಜಿಪಂ ಸದಸ್ಯೆ ಚಂದ್ರಿಕಾ ಕೇಳ್ಕರ್, ಮೈರ್ಮಾಡಿ ಸುಧಾಕರ ಶೆಟ್ಟಿ, ಹಿರಿಯರಾದ ಶಂಕರ್ ಶೆಟ್ಟಿ ಉಪಸ್ಥಿತರಿದ್ದರು.

ಕಾಪು ಉತ್ತರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪ್ರವೀಣ್ ಶೆಟ್ಟಿ ಸ್ವಾಗತಿಸಿ, ಕಾಪು ಬ್ಲಾಕ್ (ದಕ್ಷಿಣ) ಕಾಂಗ್ರೆಸ್ ಸಮಿತಿ ಅಧ್ಯಕ್ಷ ನವೀನ್‌ಚಂದ್ರ ಸುವರ್ಣ ವಂದಿಸಿದರು. ಲಕ್ಷ್ಮೀನಾರಾಯಣ ಪ್ರಭು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News