×
Ad

ಉಡುಪಿ: ಪ.ಜಾತಿಯವರಿಗೆ ಮರಳು ತೆಗೆಯಲು ಪ.ಜಾತಿಯವರಿಗೆ ಮರಳು ತೆಗೆಯಲು ಪರವಾನಿಗೆ ಪತ್ರ ನೀಡಲು ಒತ್ತಾಯ

Update: 2019-09-24 19:49 IST

ಉಡುಪಿ, ಸೆ.24: ಕಳೆದ ಸುಮಾರು ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಮರಳುಗಾರಿಕೆಗೆ ಅವಕಾಶ ಸಿಗದೇ ಅದನ್ನು ನಂಬಿದ ಕಟ್ಟಡ ಕಾರ್ಮಿಕರು ಸೇರಿದಂತೆ ವಿವಿಧ ಕಾರ್ಮಿಕರು ಕೆಲಸಲ್ಲದೆ ಕಷ್ಟದ ಜೀವನ ಸಾಗಿಸುತ್ತಿದ್ದು, ಇದೀಗ ಜಿಲ್ಲಾಧಿಕಾರಿಗಳು ಹಾಗೂ ಶಾಸಕರ ಸತತ ಪ್ರಯತ್ನದಿಂದ ಮರುಗಾರಿಕೆಗೆ ಮತ್ತೆ ಅವಕಾಶ ಸಿಕ್ಕಿದೆ.

ಮರಳುಗಾರಿಕೆಯಲ್ಲಿ ಪರಿಶಿಷ್ಟ ಜಾತಿಯ ಮೇಸ್ತ್ರಿ ಹಾಗೂ ಕೂಲಿ ಕಾರ್ಮಿಕರು ಅಧಿಕ ಸಂಖ್ಯೆಯಲ್ಲಿದ್ದಾರೆ. ಹಿಂದಿನಿಂದಲೂ ಪರಿಶಿಷ್ಟ ಜಾತಿಯ ಜನರು ಹೊಳೆಯಲ್ಲಿ ಮುಳುಗಿ ಮರಳನ್ನು ತೆಗೆಯುತ್ತಿದ್ದು ಇದನ್ನು ತಮ್ಮ ಕುಲಕಸುಬಾಗಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದ್ದರಿಂದ ಪರಿಶಿಷ್ಟ ಜಾತಿಯವರಿಗೆ ಮರಳು ತೆಗೆಯಲು ಪರವಾನಿಗೆ ಪತ್ರ ನೀಡಬೇಕೆಂದು ದಲಿತ ಮುಖಂಡ ವಾಸುದೇವ ಬನ್ನಂಜೆ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News