ಒಂದೆರಡು ದಿನಗಳಲ್ಲಿ ಮರಳು ದಿಬ್ಬ ತೆರವು ಆರಂಭ: ರಘುಪತಿ ಭಟ್

Update: 2019-09-24 14:38 GMT

 ಉಡುಪಿ, ಸೆ.24: ಸಿಆರ್‌ಝೆಡ್ ವ್ಯಾಪ್ತಿಯಲ್ಲಿರುವ ಮರಳು ದಿಬ್ಬಗಳ ತೆರವಿಗಾಗಿ 158 ಮಂದಿ ಅರ್ಜಿ ಸಲ್ಲಿಕೆ ಮಾಡಿದ್ದು, ಗುರುತಿಸಿರುವ ಎಂಟು ಮರಳು ದಿಬ್ಬಗಳನ್ನು ಹಂಚಿಕೆ ಮಾಡಿ ಪರವಾನಿಗೆ ನೀಡಲಾಗಿದೆ. ಮುಂದಿನ ಒಂದೆರಡು ದಿನಗಳಲ್ಲಿ ಮರಳು ಲಭ್ಯವಾಗಲಿದ್ದು, ಜಿಲ್ಲೆಯಲ್ಲಿ ಎರಡು ವರ್ಷ ಗಳಿಂದ ಇದ್ದ ಮರಳು ಸಮಸ್ಯೆ ಇತ್ಯರ್ಥವಾಗಲಿದೆ ಎಂದು ಶಾಕ ಕೆ. ರಘುಪತಿ ಭಟ್ ಹೇಳಿದ್ದಾರೆ.

ಉಡುಪಿ, ಸೆ.24: ಸಿಆರ್‌ಝೆಡ್ ವ್ಯಾಪ್ತಿಯಲ್ಲಿರುವ ಮರಳು ದಿಬ್ಬಗಳ ತೆರವಿಗಾಗಿ 158 ಮಂದಿ ಅರ್ಜಿ ಸಲ್ಲಿಕೆ ಮಾಡಿದ್ದು, ಗುರುತಿಸಿರುವ ಎಂಟು ಮರಳು ದಿಬ್ಬಗಳನ್ನು ಹಂಚಿಕೆ ಮಾಡಿ ಪರವಾನಿಗೆ ನೀಡಲಾಗಿದೆ. ಮುಂದಿನ ಒಂದೆರಡು ದಿನಗಳಲ್ಲಿ ಮರಳು ಲ್ಯವಾಗಲಿದ್ದು,ಜಿಲ್ಲೆಯಲ್ಲಿಎರಡುವರ್ಷಗಳಿಂದಇದ್ದಮರಳುಸಮಸ್ಯೆಇತ್ಯರ್ಥವಾಗಲಿದೆಎಂದುಶಾಸಕಕೆ.ರಘುಪತಿಟ್ ಹೇಳಿದ್ದಾರೆ. ಜಿಲ್ಲಾಧಿಕಾರಿ ನೇತೃತ್ವದ 7 ಮಂದಿಯ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಯಲ್ಲಿ ಈ ಬಗ್ಗೆ ನಿರ್ಣಯಕೈಗೊಂಡಿದ್ದು, 158 ಪರವಾನಿಗೆ ಜತೆಗೆ 2011ಕ್ಕೂ ಮುನ್ನ ಸಾಂಪ್ರಾದಾಯಿಕ ಮರಳುಗಾರಿಕೆ ಮಾಡುತ್ತಿದ್ದ 21 ಮಂದಿಗೂ ಪರವಾನಿಗೆ ನೀಡಲು ನಿರ್ಧರಿಸಿದ್ದೇವೆ. ಆಗ ಜಿಲ್ಲೆಯ ಮರಳು ಸಮಸ್ಯೆ ಪರಿಹಾರವಾಗಲಿದೆ ಎಂದರು.

 8 ಮರಳು ದಿಬ್ಬಗಳಲ್ಲಿ 8 ಲಕ್ಷ ಮೆಟ್ರಿಕ್ ಟನ್ ಮರಳು ಸಂಗ್ರಹವಿರುವ ಬಗ್ಗೆ ಎನ್‌ಐಟಿಕೆ ತಜ್ಞರು ತಿಳಿಸಿದ್ದರೂ, ಇದರಲ್ಲಿ ಕೇವಲ 3 ಲಕ್ಷ ಮೆಟ್ರಿಕ್ ಟನ್ ಪ್ರದೇಶದ ಮರಳು ತೆಗೆಯಲು ಮಾತ್ರ ಸಾಧ್ಯವಿದೆ. ಉಳಿದ 5 ಲಕ್ಷ ಮೆಟ್ರಿಕ್‌ಟನ್ ಮರಳು ಲಭ್ಯವಿರುವ ಪ್ರದೇಶದಲ್ಲಿ ವಿವಿಧ ಕಾರಣಗಳಿಂದ ಮರಳು ತೆಗೆಯಲು ಸಾಧ್ಯವಾಗುವುದಿಲ್ಲ. ಇದು ಉದ್ಯಾವರ, ಪಡುಕರೆ, ಕಡೆಕಾರು ವ್ಯಾಪ್ತಿಯಲ್ಲಿದ್ದು, ಮೀನುಗಾರರ ವಿರೋಧದ ಹಿನ್ನೆಲೆಯಲ್ಲಿ ತೆರವು ಮಾಡಲು ಸಾಧ್ಯವಾಗುತ್ತಿಲ್ಲ ಎಂದರು.

ಸಿಆರ್‌ಝೆಡ್ ವ್ಯಾಪ್ತಿಯಲ್ಲಿ 25 ಲಕ್ಷ ಮೆಟ್ರಿಕ್ ಟನ್‌ನಷ್ಟು ಮರಳಿನ ಸಂಗ್ರಹ ವಿದ್ದರೂ, ಹಿಂದಿನ ಜಿಲ್ಲಾಡಳಿತ ಉದ್ದೇಶಪೂರ್ವಕವಾಗಿ 8 ಲಕ್ಷ ಮೆಟ್ರಿಕ್ ಟನ್‌ನಷ್ಟು ಮಾತ್ರವೇ ಗುರುತಿಸಿದೆ. ಬಾರಕೂರು, ಹಾವಂಜೆ ಮುಂತಾದ ಪ್ರದೇಶಗಳಲ್ಲಿ ಲಭ್ಯವಿರುವ ಮರಳು ದಿಬ್ಬಗಳನ್ನು ಗುರುತಿಸುವ ಕೆಲಸ ಆಗಿಲ್ಲ. ಮುಂದೆ ಈ ಎಲ್ಲಾ ಪ್ರದೇಶಗಳನ್ನು ಗುರುತಿಸಿ ಪರವಾನಿಗೆ ನೀಡುವ ಬಗ್ಗೆ ತಿಳಿಸಿದ್ದೇವೆ. ಅಲ್ಲದೇ ಪರವಾನಿಗೆ ಪಡೆದವರು ಕೂಡಾ ಸಾರ್ವಜನಿಕರಿಗೆ ತೊಂದರೆಯಾಗದಂತೆ ಮರಳು ದಿಬ್ಬ ತೆರವು ಗೊಳಿಸುವಂತೆ ಸೂಚಿಸಿದ್ದೇವೆ ಎಂದರು.

 ಸಾಂಪ್ರದಾಯಿಕ ಪದ್ಧತಿಯಂತೆ ಮರಳು ದಿಬ್ಬಗಳ ತೆರವು ನಡೆಯಲಿದ್ದು, ಯಾವುದೇ ಯಂತ್ರಗಳನ್ನು ಬಳಸದಂತೆ ಸ್ಪಷ್ಟವಾಗಿ ಗುತ್ತಿಗೆದಾರರಿಗೆ ತಿಳಿಸಲಾಗಿದೆ. ಹೊರಜಿಲ್ಲೆಗಳಿಗೆ ಇಲ್ಲಿನ ಮರಳು ಸಾಗಾಟವಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳ ಲಾಗುವುದು. ಕಿಂಡಿ ಅಣೆಕಟ್ಟು, ಅಣೆಕಟ್ಟುಗಳಿರುವ ಕಡೆಗಳಲ್ಲಿ ಹೂಳೆತ್ತಲು ಅವಕಾಶವಿದೆ ಎಂದೂ ಭಟ್ ನುಡಿದರು.

ಕರಾವಳಿಗೆ ಪ್ರತ್ಯೇಕ ಮರಳು ನೀತಿ:  ನಾನಾ ಸಿಆರ್‌ಝೆಡ್ ವ್ಯಾಪ್ತಿಯಲ್ಲೂ ಮರಳುಗಾರಿಕೆ ಶೀಘ್ರವೇ ಅವಕಾಶ ನೀಡಲಾಗುವುದು. ಬಜೆಯಲ್ಲಿ ಹೂಳೆತ್ತಲು ಟೆಂಡರ್ ಆಗಿದೆ. ಬಜೆಯಿಂದ ಪುತ್ತಿಗೆ ಹಾಗೂ ಪುತ್ತಿಗೆಯಿಂದ ಶೀರೂರು ಡ್ಯಾಂ ವರೆಗೆ ಶೀಘ್ರವೇ ಹೂಳೆತ್ತುವಿಗೆ ಆರಂಭಗೊಳ್ಳಲಿದೆ. ಅಲ್ಲಿ ದೊರೆಯುವ ಮರಳನ್ನು ಸ್ಟಾಕ್‌ಯಾರ್ಡ್‌ಗೆ ತಂದು ಸ್ಯಾಂಡ್‌ಬಜಾರ್ ಆ್ಯಪ್ ಮೂಲಕ ಜನರಿಗೆ ನೀಡಲಾಗುವುದು ಎಂದರು.

ನಾಲ್ಕು ಮಂದಿ ಶಾಸಕರ ಒಂದು ತಂಡ ಶೀಘ್ರವೇ ಗುಜರಾತ್‌ಗೆ ತೆರಳಿ ಅಲ್ಲಿ ನಡೆದುಕೊಂಡು ಬಂದಿರುವ ಸಾಂಪ್ರದಾಯಿಕ ಮರಳುಗಾರಿಕೆ ಬಗ್ಗೆ ಅಧ್ಯಯನ ನಡೆಸಿ ಅದನ್ನು ಇಲ್ಲೂ ಅಳವಡಿಸುವ ಬಗ್ಗೆ ಚಿಂತನೆ ನಡೆಸಲಾಗುವುದು. ಅಲ್ಲದೇ ರಾಜ್ಯದಲ್ಲಿ ಕರಾವಳಿಗೆ ಪ್ರತ್ಯೇಕ ಮರಳು ನೀತಿಯನ್ನು ಅಳವಡಿಸುವ ಬಗ್ಗೆಯೂ ಪ್ರಯತ್ನ ನಡೆಯಲಿದೆ ಎಂದು ರಘುಪತಿ ಭಟ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News