×
Ad

ಕಬ್ಬು ಬೆಳೆಯುವ ರೈತರಿಗೆ ಕಾರ್ಖಾನೆಯಿಂದ ಕಬ್ಬಿನ ಬೀಜ ಪೂರೈಕೆ

Update: 2019-09-24 21:57 IST

ಉಡುಪಿ, ಸೆ. 24: ವಾರಾಹಿ ನೀರಾವರಿ ಯೋಜನೆಯಿಂದ ಈಗಾಗಲೇ ಸಾಕಷ್ಟು ರೈತರ ಕೃಷಿ ಭೂಮಿಗೆ ಕಾಲುವೆ ಮೂಲಕ ನೀರು ಹರಿಯಲಾರಂಭಿ ಸಿರುವುದರಿಂದ ಮತ್ತು ಇನ್ನಿತರ ಮೂಲಗಳಿಂದ ನೀರಾವರಿ ಸೌಲಭ್ಯವಿರುವ ರೈತರು ಕಬ್ಬು ಬೆಳೆಯಲು ಆಸಕ್ತರಾಗಿರುವುದರಿಂದ, ಬ್ರಹ್ಮಾವರದ ಸ್ಥಗಿತಗೊಂಡ ಸಹಕಾರಿ ಸಕ್ಕರೆ ಕಾರ್ಖಾನೆಯ ಪುನಶ್ಚೇತನದ ಅಂಗವಾಗಿ ಕಾರ್ಖಾನೆಯ ಕಾರ್ಯವ್ಯಾಪ್ತಿಯಲ್ಲಿ ಕಬ್ಬು ಅಭಿವೃದ್ಧಿಪಡಿಸುವ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಗಿದೆ.

ಉಡುಪಿ, ಸೆ.24:ವಾರಾಹಿ ನೀರಾವರಿ ಯೋಜನೆಯಿಂದ ಈಗಾಗಲೇ ಸಾಕಷ್ಟು ರೈತರ ಕೃಷಿ ಭೂಮಿಗೆ ಕಾಲುವೆ ಮೂಲಕ ನೀರು ಹರಿಯಲಾರಂಭಿಸಿರುವುದರಿಂದ ಮತ್ತು ಇನ್ನಿತರ ಮೂಲಗಳಿಂದ ನೀರಾವರಿ ಸೌಲ್ಯವಿರುವ ರೈತರು ಕಬ್ಬು ಬೆಳೆಯಲು ಆಸಕ್ತರಾಗಿರುವುದರಿಂದ, ಬ್ರಹ್ಮಾವರದ ಸ್ಥಗಿತಗೊಂಡ ಸಹಕಾರಿ ಸಕ್ಕರೆ ಕಾರ್ಖಾನೆಯ ಪುನಶ್ಚೇತನದ ಅಂಗವಾಗಿ ಕಾರ್ಖಾನೆಯ ಕಾರ್ಯವ್ಯಾಪ್ತಿಯಲ್ಲಿ ಕಬ್ಬು ಅಭಿವೃದ್ಧಿಪಡಿಸುವ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಗಿದೆ. ಕಬ್ಬಿನ ಬೀಜೋತ್ಪಾದನೆ ಮಾಡಲು ಆಸಕ್ತರಿರುವ ರೈತರಿಗೆ ಈಗಾಗಲೇ ಮಂಡ್ಯ ಜಿಲ್ಲೆಯಿಂದ ಅಧಿಕ ಇಳುವರಿಯ ಹಾಗೂ ಉತ್ತಮ ತಳಿಯ ಕಬ್ಬಿನ ಬೀಜದ ಸಸಿಗಳನ್ನು ತರಿಸಿ ನೀಡಲಾಗಿದ್ದು, ಈ ರೈತರು ತಮ್ಮ ಹೊಲದಲ್ಲಿ ಕಬ್ಬಿನ ಬೀಜೆತ್ಪಾದನೆಗಾಗಿ ಕಬ್ಬು ಬೆಳೆದಿದ್ದಾರೆ.

ಕಬ್ಬಿನ ಬೀಜೋತ್ಪಾದನೆ ಮಾಡಲು ಆಸಕ್ತರಿರುವ ರೈತರಿಗೆ ಈಗಾಗಲೇ ಮಂಡ್ಯ ಜಿಲ್ಲೆಯಿಂದ ಅಧಿಕ ಇಳುವರಿಯ ಹಾಗೂ ಉತ್ತಮ ತಳಿಯ ಕಬ್ಬಿನ ಬೀಜದ ಸಸಿಗಳನ್ನು ತರಿಸಿ ನೀಡಲಾಗಿದ್ದು, ಈ ರೈತರು ತಮ್ಮ ಹೊಲದಲ್ಲಿ ಕಬ್ಬಿನ ಬೀಜೋತ್ಪಾದನೆಗಾಗಿ ಕಬ್ಬು ಬೆಳೆದಿದ್ದಾರೆ. ಪ್ರಸ್ತುತ ಸುಮಾರು 2000 ಟನ್‌ಗಳಷ್ಟು ಕಬ್ಬಿನ ಬೀಜ ಲಭ್ಯವಿದ್ದು, ಕಬ್ಬು ಬೆಳೆಯಲು ತಯಾರಿರುವ ರೈತರಿಗೆ ಆಧ್ಯತೆಯಲ್ಲಿ ವಿತರಣೆ ಮಾಡಲಾಗುವುದು. ಕಾರ್ಖಾನೆಯ ಕಾರ್ಯವ್ಯಾಪ್ತಿಯಲ್ಲಿ ಕಬ್ಬು ಬೆಳೆಯಲು ಆಸಕ್ತರಿರುವ ರೈತರು ತಮ್ಮ ವಿಳಾಸ, ಜಮೀನಿನ ಸರ್ವೆ ನಂಬ್ರ ಹಾಗೂ ಎಷ್ಟು ಎಕ್ರೆ ವಿಸ್ತೀರ್ಣದಲ್ಲಿ ಕಬ್ಬು ಬೆಳೆಯಬಹುದು ಎಂಬ ಬಗ್ಗೆ ಲಿಖಿತ ಮಾಹಿತಿಯನ್ನು ಅ.31ರೊಳಗೆ ಕಾರ್ಖಾನೆಗೆ ತಲುಪಿಸಬೇಕು. ಮೊದಲು ಬಂದ ಅರ್ಜಿಗಳಿಗೆ ಪ್ರಥಮ ಪ್ರಾಶಸ್ತ್ಯದಲ್ಲಿ ಕಬ್ಬಿನ ಬೀಜ ವಿತರಣೆ ಮಾಡಲಾಗುವುದು.

ಕಾರ್ಖಾನೆಯು ಹೊಂದಿರುವ ಒಟ್ಟು ಪಾಲು ಬಂಡವಾಳದಲ್ಲಿ ರೈತರು ಮತ್ತು ಸಹಕಾರಿ ಸಂಸ್ಥೆಗಳ ಪಾಲು ಬಂಡವಾಳವು ತೀರಾ ಕಡಿಮೆ ಇರುವುದರಿಂದ ಉಡುಪಿ ಹಾಗೂ ದ.ಕ ಜಿಲ್ಲೆಯಲ್ಲಿರುವ ರೈತರು, ಸಹಕಾರಿ ಸಂಸ್ಥೆಗಳು ಮತ್ತು ಉದ್ದಿಮೆದಾರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲು ಬಂಡವಾಳವನ್ನು ಬ್ರಹ್ಮಾವರದ ಸಕ್ಕರೆ ಕಾರ್ಖಾನೆಯಲ್ಲಿ ತೊಡಗಿಸುವ ಮೂಲಕ ಸಹಕಾರಿ ಸಕ್ಕರೆ ಕಾರ್ಖಾನೆ ಯನ್ನು ಉಳಿಸುವಂತೆ ಕಾರ್ಖಾನೆಯ ಅಧ್ಯಕ್ಷ ಎಚ್. ಜಯಶೀಲ ಶೆಟ್ಟಿ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News