×
Ad

ವಿಶ್ವಸಂಸ್ಥೆಯಲ್ಲಿ ಬಾಂಗ್ಲಾ ಪ್ರಧಾನಿಗೆ ‘ವ್ಯಾಕ್ಸಿನ್ ಹೀರೊ’ ಪ್ರಶಸ್ತಿ

Update: 2019-09-24 21:57 IST

 ನ್ಯೂಯಾರ್ಕ್, ಸೆ. 24: ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾಗೆ ಪ್ರತಿಷ್ಠಿತ ‘ವ್ಯಾಕ್ಸಿನ್ (ಲಸಿಕೆ) ಹೀರೊ’ ಪ್ರಶಸ್ತಿಯನ್ನು ನೀಡಲಾಗಿದೆ. ಲಸಿಕಾ ಕಾರ್ಯಕ್ರಮದಲ್ಲಿ ದೇಶ ಸಾಧಿಸಿದ ಅಮೋಘ ಪ್ರಗತಿ, ಅದರಲ್ಲೂ ವಿಶೇಷವಾಗಿ ಪೋಲಿಯೊ, ಕಾಲರಾ ಮತ್ತು ವಿವಿಧ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವಲ್ಲಿ ಅವರು ವಹಿಸಿದ ಪಾತ್ರಕ್ಕಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ.

ವಿಶ್ವಸಂಸ್ಥೆಯ ಮಹಾಸಭೆಯ 74ನೇ ಅಧಿವೇಶನದ ನೇಪಥ್ಯದಲ್ಲಿ, ನ್ಯೂಯಾರ್ಕ್‌ನ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಹಸೀನಾರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು ಎಂದು ಜಿನೀವದ ‘ಗ್ಲೋಬಲ್ ಅಲಯನ್ಸ್ ಫಾರ್ ವ್ಯಾಕ್ಸಿನ್ ಆ್ಯಂಡ್ ಇಮ್ಯೂನೈಸೇಶನ್ಸ್ (ಗವಿ)’ ಹೇಳಿಕೆಯೊಂದರಲ್ಲಿ ತಿಳಿಸಿದೆ.

‘ಗವಿ’ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಎಂಗೋಝಿ ಒಕೊಂಜೊ-ಇವಿಯೇಲ ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದ ಬಾಂಗ್ಲಾ ಪ್ರಧಾನಿ, ಪ್ರಶಸ್ತಿಯನ್ನು ತನ್ನ ದೇಶದ ಜನರಿಗೆ ಸಮರ್ಪಿಸಿದ್ದಾರೆ.

 ಹಸೀನಾ ರೋಗನಿರೋಧತೆ ಮತ್ತು ಮಕ್ಕಳು ಮತ್ತು ಮಹಿಳಾ ಸಬಲೀಕರಣದ ನಿಜವಾದ ನಾಯಕಿಯಾಗಿದ್ದಾರೆ ಎಂದು ಪ್ರಶಸ್ತಿ ಜೊತೆಗೆ ನೀಡಲಾದ ಮಾನಪತ್ರದಲ್ಲಿ ಶ್ಲಾಘಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News