×
Ad

ವಿದ್ಯಾರ್ಥಿ ತುಳು ಸಮ್ಮೇಳನಕ್ಕೆ ಲಾಂಛನ ಆಹ್ವಾನ

Update: 2019-09-24 22:33 IST

ಮಂಗಳೂರು, ಸೆ.24: ತುಳು ಪರಿಷತ್ ವತಿಯಿಂದ ಡಿಸೆಂಬರ್‌ನಲ್ಲಿ ಮಂಗಳೂರಿನಲ್ಲಿ ನಡೆಯುವ ಪ್ರಥಮ ವಿದ್ಯಾರ್ಥಿ ತುಳು ಸಮ್ಮೇಳನಕ್ಕೆ ಆಕರ್ಷಕ ಹಾಗೂ ಅರ್ಥಗರ್ಭಿತ ಲಾಂಛನವನ್ನು ಆಹ್ವಾನಿಸಲಾಗಿದೆ.

   ತುಳುನಾಡಿನ ಬದುಕು,ಸಂಸ್ಕೃತಿಯನ್ನು ಬಿಂಬಿಸುವ ಲಾಂಛನವನ್ನು ಡಿಸೈನ್ ಮಾಡಿ ಕಳುಹಿಸಬಹುದು. ಆಯ್ಕೆಯಾದ ಲಾಂಛನಕ್ಕೆ ನಗದು ಬಹುಮಾನವಿದೆ. ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಯ ಧೃಢೀಕರಣ ಪತ್ರವನ್ನು ಲಾಂಛನದ ಜೊತೆಗೆ ಅಕ್ಟೋಬರ್ 12ರೊಳಗೆ ‘ಪ್ರಭಾಕರ್ ನೀರ್‌ಮಾರ್ಗ, ಅಧ್ಯಕ್ಷರು, ವಿದ್ಯಾರ್ಥಿ ತುಳು ಸಮ್ಮೇಳನ ಸಮಿತಿ, ಸಮ್ಮೇಳನ ಕಾರ್ಯಾಲಯ, ಮ್ಯಾಪ್ಸ್ ಕಾಲೇಜು, ಬಂಟ್ಸ್‌ಹಾಸ್ಟೆಲ್ ರೋಡ್ ಮಂಗಳೂರು -575 003 ಅಥವಾ (tuluparishath@gmail.com)ಮೂಲಕ ಕಳುಹಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News