×
Ad

ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರರ್ದಶನ ಸ್ಪರ್ಧೆ: ನ್ಯೂ ಶಮ್ಸ್ ಸ್ಕೂಲ್ ತಂಡಕ್ಕೆ ತೃತೀಯಾ ಸ್ಥಾನ

Update: 2019-09-24 22:40 IST

ಭಟ್ಕಳ: ತರಬಿಯತ್ ಎಜ್ಯುಕೇಶನ್ ಸೂಸೈಟಿಯ ನ್ಯೂ ಶಮ್ಸ್ ಸ್ಕೂಲ್ ತಂಡವು ಸೋಮವಾರ ಕುಮಟಾದ ಡಯಟ್ ನಲ್ಲಿ ಜರಗಿದ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ದೆಯಲ್ಲಿ ತೃತಿಯಾ ಸ್ಥಾನ ಪಡೆದುಕೊಂಡಿದ್ದು ಮಂಗಳವಾರ ಶಾಲೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ವಿಜ್ಞಾನ ತಂಡದ ಸದಸ್ಯ ಹಾಗೂ ಮಾರ್ಗದರ್ಶಕ ಶಿಕ್ಷಕರನ್ನು ಪುಷ್ಪಹಾರ ಹಾಕುವುದರ ಮೂಲಕ ಸನ್ಮಾನಿಸಿ ಗೌರವಿಸಲಾಯಿತು.

ತಂಡದ ಸದಸ್ಯರಾದ ಅಬ್ದುಲ್ ಕಾದಿರ್, ಸಲ್‍ಸಬೀಲ್ ಕೋಬಟ್ಟೆ, ಯಾಲಾ ರುಕ್ನುದ್ದೀನ್ ಹಾಗೂ ಮಾರ್ಗದರ್ಶಕ ಶಿಕ್ಷಕ ಮಂಜುನಾಥ್ ಹೆಬ್ಬಾರ್ ರನ್ನು ಸನ್ಮಾಸಿ ಮಾತನಾಡಿದ ಸಂಸ್ಥೆಯ ಪ್ರಮುಖ ಅಬ್ದುಲ್ ಕಾದಿರ್ ಬಾಷಾ ರುಕ್ನುದ್ದೀನ್ ವಿದ್ಯಾರ್ಥಿ ದೆಸೆಯಲ್ಲಿ ವಿದ್ಯಾರ್ಥಿಗಳು ವೈಜ್ಞಾನಿಕ ದೃಷ್ಟಿಕೋನವನ್ನು ಬೆಳೆಸಿಕೊಂಡು ಭವಿಷ್ಯದಲ್ಲಿ ವೈಜ್ಞಾನಿಕ  ರಚನಾತ್ಮಕ ಸಂಶೋಧನೆಗಳನ್ನು ಕೈಗೊಂಡು ದೇಶಕ್ಕೆ ಕೀರ್ತಿ ತರುವಂತಾಗಬೇಕು ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಮುಹಮ್ಮದ್ ಇಸ್ಮಾಯಿಲ್ ಮೊಹತೆಶಮ್, ಹಿರಿಯಾ ಸದಸ್ಯರಾದ ಸೈಯ್ಯದ್ ಸಲಾಹುದ್ದೀನ್ ಎಸ್.ಕೆ, ಪಿ.ಆರ್.ಒ ಅಝೀಝುರ್ರಹ್ಮಾನ್ ರುಕ್ನುದ್ದೀನ್, ಸೈಯ್ಯದ್ ಯಾಸಿರ್ ಬರ್ಮಾವರ್ ನದ್ವಿ, ಅಬ್ದುಲ್ ಮುನಿಮ್ ರುಕ್ನುದ್ದೀನ್, ಮುಹಮ್ಮದ್ ರಝಾ ಮಾನ್ವಿ, ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News