ದೇರಳಕಟ್ಟೆ: ಕುಟುಂಬ ಮಿಲನ ಹಾಗೂ ಗುರುಶ್ರೀ ಪ್ರಶಸ್ತಿ ಕಾರ್ಯಕ್ರಮ

Update: 2019-09-24 17:14 GMT

ಕೊಣಾಜೆ: ರೋಟರಿ ಕ್ಲಬ್ ದೇರಳೆಕಟ್ಟೆ ಕುಟುಂಬ ಮಿಲನ ಕಾರ್ಯ ಕ್ರಮ ಮತ್ತು ಗುರು ಶ್ರೀ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ದೇರಳೆಕಟ್ಟೆ ನಿಟ್ಟೆ ಸೆಮಿನಾರ್ ಹಾಲ್ ನಲ್ಲಿ  ಭಾನುವಾರ ನಡೆಯಿತು.

ಕಾರ್ಯಕ್ರಮದಲ್ಲಿ ದ.ಕ.ಜಿಲ್ಲಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಲಾರ್ ಶಾಲಾ ಶಿಕ್ಷಕ ರಾಧಾಕೃಷ್ಣ ರಾವ್, ಬೋಳಿಯಾರ್ ಮಸೀದಿ ಬಳಿ ಶಾಲಾ ಶಿಕ್ಷಕಿ  ಗೀತಾ, ದ.ಕ.ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಉಚ್ಚಿಲ ಗುಡ್ಡೆಯ ಮುಖ್ಯೋಪಾಧ್ಯಾಯರಾದ  ಹರ್ಷಲತಾ, ಕರ್ನಾಟಕ ಪಬ್ಲಿಕ್ ಸ್ಕೂಲ್ ಮೊಂಟೆಪದವು  ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರಭಾಕರ್ ಜೋಗಿಯವರಿಗೆ ರೋಟರಿ ಗುರುಶ್ರೀ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು.

ಸಹಾಯಕ ರಾಜ್ಯಪಾಲರಾದ ರೊಟೇರಿಯನ್ ಸುಮಿತ್ ರಾವ್ ಮುಖ್ಯ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಕ್ಕಳಿಗೆ ತನ್ನದೇ ಆದ ಪ್ರತಿಭೆಯಿದೆ , ತಂದೆ ತಾಯಿಯು ಇಷ್ಟವಿಲ್ಲದ ಕೋರ್ಸನ್ನು ಕಲಿಯಲು ಮಕ್ಕಳಿಗೆ ಒತ್ತಡ ಹಾಕಬಾರದು,ಎಲ್ಲಾ ಮಕ್ಕಳು ಇಂಜಿನಿಯರ್,ಡಾಕ್ಟರ್ ಹಾಗಲು ಸಾದ್ಯವಿಲ್ಲ, ಅವರ ಪ್ರತಿಭೆಗೆ ಅನುಗುಣವಾಗಿ ಅವರು ಜೀವನದಲ್ಲಿ ಮುಂದೆ ಬರುತ್ತಾರೆ, ನಾವು ಮಕ್ಕಳಿಗೆ ಮೊಬೈಲನ್ನು ಕೊಡಬಾರದೆಂದು ಹೇಳಿದರು. ಮಾಜಿ ಜಿಲ್ಲಾ ಗವರ್ನರ್ ದೇವದಾಸ್ ರೈ ಕಾರ್ಯಕ್ರಮದ ಅಧ್ಯಕ್ಷತೆ  ವಹಿಸಿ ಮಾತನಾಡಿದರು ರೋಟರಿ ಕ್ಲಬ್ ದೇರಳೆಕಟ್ಟೆ ಅಧ್ಯಕ್ಷ ರೊಟೇರಿಯನ್ ಡಾ.ರವಿಶಂಕರ್ ರಾವ್, ಉಪಾಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ಕಾರ್ಯದರ್ಶಿ ವಿಕ್ರಮ್ ದತ್ತ, ದೇರಳೆಕಟ್ಟೆ ರೋಟ್ರಾಕ್ಟ್ ಕ್ಲಬ್ ಚೇರ್ ಮೆನ್ ಶ್ರೀ ಪ್ರಸಾದ್ ಆಳ್ವ, ಅಧ್ಯಕ್ಷ ಕುಮಾರಿ ತಪಸ್ಯ, ಕಾರ್ಯದರ್ಶಿ ಅರ್ಜುನ್.ಆರ್.ಶೆಟ್ಟಿ,  ನಿರ್ದೇಶಕ ಜಯರಾಮ್ ಶ್ರೀಯಾನ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News