ಮೂಡುಬಿದಿರೆ: ಮೈನ್ ಶಾಲೆಯಲ್ಲಿ 2019-20 ನೇ ಸಾಲಿನ ಉಚಿತ ಸೈಕಲ್ ವಿತರಣೆ

Update: 2019-09-24 17:25 GMT

ಮೂಡುಬಿದಿರೆ: ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೂಡುಬಿದಿರೆ ಮೈನ್ ಶಾಲೆಯಲ್ಲಿ ಸರಕಾರದಿಂದ ಉಚಿತವಾಗಿ ಕೊಡಲ್ಪಡುವ 2019-20 ನೇ ಸಾಲಿನ ಸೈಕಲ್ ವಿತರಣಾ ಕಾರ್ಯಕ್ರಮವು ಶನಿವಾರ ನಡೆಯಿತು.

ಶಾಸಕ ಎ.ಉಮಾನಾಥ ಕೋಟ್ಯಾನ್ 8 ನೇ ತರಗತಿಯ 9 ಮಕ್ಕಳಿಗೆ ಸೈಕಲ್ ವಿತರಿಸಿ ಮಾತನಾಡಿದ ಅವರು, ಸೈಕಲನ್ನು ಸದುಪಯೋಗಪಡಿಸಿಕೊಳ್ಳುವಂತೆ ಮತ್ತು ಯಾವುದೇ ದುರ್ಘಟನೆ ಸಂಭವಿಸದಂತೆ ಜಾಗ್ರತೆಯಿಂದ ಸೈಕಲ್ ಚಲಾಯಿಸುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ತಮ್ಮ ಅನುದಾನದಿಂದ 5 ಲಕ್ಷ ರೂ.ಗಳನ್ನು ಶಾಲಾ ರಂಗಮಂಟಪಕ್ಕೆ ಬಿಡುಗಡೆ ಮಾಡುವ ಭರವಸೆಯನ್ನು ಶಾಸಕರು ಇದೇ ಸಂದರ್ಭದಲ್ಲಿ ನೀಡಿದರು.

ಎಸ್.ಡಿ.ಎಂ.ಸಿ. ಅಧ್ಯಕ್ಷೆ ಬೇಬಿ, ಸದಸ್ಯ ಸುದರ್ಶನ್ ಎಂ.,ಪುರಸಭಾ ಚುನಾಯಿತ ಸದಸ್ಯೆ ಸ್ವಾತಿ ಪ್ರಭು,  ಪುರಸಭಾ ಮಾಜಿ ಸದಸ್ಯ ಲಕ್ಷ್ಮಣ ಪೂಜಾರಿ, ಎಸ್.ಡಿ.ಎಂ.ಸಿ. ಮಾಜಿ ಅಧ್ಯಕ್ಷ ರಘುವೀರ್ ಶೆಣೈ, ಶಾಲಾ ಗೌರವ ಶಿಕ್ಷಕ, ಹನುಮಂತ ವೆಂಕಟರಮಣ ದೇವಸ್ಥಾನದ ಖಜಾಂಜಿ ಶಿವಾನಂದ ಪ್ರಭು ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕಿ ಅನುಸೂಯ ಸ್ವಾಗತಿಸಿದರು. ಶಿಕ್ಷಕಿಯರಾದ ಶಶಿಕಲಾ, ರೋಹಿಣಿ, ಜೆಸಿಂತಾ, ಸುಖಿ, ಫ್ಲೇವಿಯಾ ಕಾರ್ಯಕ್ರಮದಲ್ಲಿ ಸಹಕರಿಸಿದರು. ಶಿಕ್ಷಕಿ ಸತ್ಯವತಿ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News