ಕಲ್ಲಡ್ಕ: ಕೆಸರ್ದ ಕಂಡೊಡು ಕುಸಲದ ಗೊಬ್ಬುಲು

Update: 2019-09-24 17:43 GMT

ಬಂಟ್ವಾಳ, ಸೆ. 24: ಕಲ್ಲಡ್ಕದಲ್ಲಿ ವಿವಿಧ ಕಲೆಗಳು ಅಡಕವಾಗಿದ್ದಲ್ಲದೆ ಅತಿಹೆಚ್ಚು ಕಲಾವಿದರನ್ನು ಸಮಾಜಕ್ಕೆ ನೀಡಿದ ಊರಾಗಿದೆ ಎಂದು ತುಳು ಹಾಸ್ಯ ಚಲನಚಿತ್ರ ನಟ ಅರವಿಂದ ಬೋಳಾರ್ ಹೇಳಿದ್ದಾರೆ.

ಅವರು ಬಿಲ್ಲವ ಸಮಾಜ ಸೇವಾ ಸಂಘ ಕಲ್ಲಡ್ಕ ವಲಯದ ಬಾಳ್ತಿಲ, ಗೋಳ್ತಮಜಲು, ಅಮ್ಟೂರು, ವೀರಕಂಬ, ಬೊಂಡಾಲ, ಬೋಳಂತೂರು, ಗ್ರಾಮ ವ್ಯಾಪ್ತಿಯ ವಲಯಮಟ್ಟದ ಬಿಲ್ಲವ ಸಮುದಾಯದ (ಕೆಸರ್ದ ಕಂಡೊಡು ಕುಸಲದ ಗೊಬ್ಬುಲು) ಕೆಸರುಗದ್ದೆ ಕೂಟದಲ್ಲಿ ಮಾತನಾಡುತ್ತಿದ್ದರು. ಕಾಡೆದಿ ಭದ್ರಕಾಳಿ ದೇವಸ್ಥಾನ ಏರಮಲೆ ನಾಟಿ-ನರಿಕೊಂಬು ಇರ ಪ್ರಧಾನ ಅರ್ಚಕ ಕೇಶವ ಶಾಂತಿ ಹಾಗೂ ಮನೋಜ್ ಕ್ರೀಡಾಕೂಟವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ರುಕ್ಮಯ, ಡಾ. ವಿದ್ಯಾಸಾಗರ್, ರಂಜಿತ್ ಸುವರ್ಣ, ಇಂದಿರೇಶ, ಲೋಕೇಶ್ ಕೋಡಿಕೆರೆ, ಲೋಕೇಶ್ ಪೂಜಾರಿ, ಸುಂದರ, ಶರತ್ ಕುಮಾರ್ ಅಮ್ಟೂರು, ಕೃಷ್ಣಪ್ಪ ಪೂಜಾರಿ ತೋಟ, ಗುರುರಾಜ್ ಬಂಟ್ವಾಳ, ಸಂಜೀವ ಪೂಜಾರಿ, ಚಂದ್ರಶೇಖರ್, ಶರತ್, ವಸಂತ ವಸುಧ ಗೋಳ್ತಮಜಲು, ಮಹಾಬಲ ಮುಳಿ ಕೊಡಂಗೆ, ಚಂದ್ರಶೇಖರ್ ಬಂಗೇರ ಬಾಯಿಲ, ಜನಾರ್ಧನ ಪೂಜಾರಿ ಗೋಲಿಮಾರ್, ಗಂಗಾಧರ ಕೆ ಹಾಗೂ ಕ್ರೀಡಾಕೂಟ ಗದ್ದೆಯ ಮಾಲಕರಾದ ದಿ. ಚಂದ್ರವತಿ ಪೂಜಾರ್ತಿ ಅವರ ಕುಟುಂಬಸ್ಥರು ಉಪಸ್ಥಿತರಿದ್ದರು. ಗ್ರಹಿಕಾ ಪ್ರಾರ್ಥಿಸಿ, ಮೋನಪ್ಪ ದೇವಸ್ಯ ಸ್ವಾಗತಿಸಿದರು. ವಸಂತ ಬಟ್ಟ ಹಿತ್ತಿಲು ವಂದಿಸಿದರು.

ಬಳಿಕ ಮಕ್ಕಳಿಗೆ ಮಹಿಳೆಯರಿಗೆ ಪುರುಷರಿಗೆ ವಿವಿಧ ರೀತಿಯ ಕ್ರೀಡಾಕೂಟಗಳು ನಡೆದವು. ಈ ಮಧ್ಯೆ ಕಾರ್ಯಕ್ರಮಕ್ಕೆ ಆಗಮಿಸಿದ ಶ್ರೀ ಹರಿಕೃಷ್ಣ ಬಂಟ್ವಾಳ್, ಲಕ್ಷ್ಮೀಶ ಸುವರ್ಣ ಸೇಸಪ್ಪ ಕೋಟ್ಯಾನ್, ಸಂಜೀವ ಪೂಜಾರಿ, ಶ್ರೀನಿವಾಸ ಪೂಜಾರಿ, ಮಿಥುನ್ ಪೂಜಾರಿ ಹೊಸಮನೆ ಮೊದಲಾದವರು ಶುಭಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News