×
Ad

ಸಂದೀಪ್ ಶೆಟ್ಟಿಗೆ ಗೌರವ ಡಾಕ್ಟರೇಟ್

Update: 2019-09-25 18:46 IST

ಉಡುಪಿ, ಸೆ.25: ಬೆಂಗಳೂರಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಕಲ್ಚರ್ ಇವರು ನೀಡುವ 2019ನೇ ಸಾಲಿನ ಗೌರವ ಡಾಕ್ಟರೇಟ್‌ನ್ನು ಕುಂದಾಪುರದ ಕೋಡಿ ಬ್ಯಾರಿಸ್ ಕಾಲೇಜಿನ ಕನ್ನಡ ಉಪನ್ಯಾಸಕ ಸಂದೀಪ್ ಕುಮಾರ್ ಶೆಟ್ಟಿ ಇವರಿಗೆ ಇತ್ತೀಚೆಗೆ ಬೆಂಗಳೂರಿನಲ್ಲಿ ಪ್ರದಾನ ಮಾಡಲಾಯಿತು.

ಕಡಲ ಸಿರಿ ಘಟಕ ಸ್ಥಾಪಕರಾಗಿ ಮುಂಚೂಣಿಯಲ್ಲಿ ಸೇವೆಗೈದ, ಕನ್ನಡ ನುಡಿ ಮುತ್ತು ಪ್ರಬಂಧ ರಚನೆಗೆ ಸಂದ ಗೌರವ ಇದಾಗಿದೆ ಎಂದು ಸಮಾರಂಭದ ಅಧ್ಯಕ್ಷ ಡಾ.ಟಿ.ಆರ್.ಭಾಸ್ಕರನ್ ಹೇಳಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಅಶೋಕ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News