ಮುದ್ರಾಡಿ ಅಖಿಲ ಭಾರತ ನವರಂಗೋತ್ಸವ: ಶಾಸಕ ಸುಕುಮಾರ ಶೆಟ್ಟಿ ಸೇರಿ 6 ಮಂದಿಗೆ ಪ್ರಶಸ್ತಿ
Update: 2019-09-25 18:48 IST
ಹೆಬ್ರಿ, ಸೆ.25: ಮುದ್ರಾಡಿ ನಮ ತುಳುವೆರ್ ಕಲಾ ಸಂಘಟನೆಯ ಅಖಿಲ ಭಾರತ ನವರಂಗೋತ್ಸವದಲ್ಲಿ ನೀಡುವ ಕರ್ಣಾಟ ನಾಡ ಪೋಷಕ ಪ್ರಶಸ್ತಿಗೆ ಈ ಬಾರಿ ಒಟ್ಟು ಆರು ಮಂದಿ ಆಯ್ಕೆಯಾಗಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಸುಕುಮಾರ ಮೋಹನ್ ತಿಳಿಸಿದ್ದಾರೆ.
ಸೆ.29ರ ರವಿವಾರ ನಾಟ್ಕ ಮುದ್ರಾಡಿಯ 34ನೇ ವರ್ಷದ ಸಂಭ್ರಮ ಮತ್ತು ಪ್ರಶಸ್ತಿ ಪ್ರದಾನ ನಡೆಯಲಿದೆ. ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ, ಬಿ.ಕೆ.ಗಣೇಶ ರೈ ದುಬೈ, ಚಂದ್ರಹಾಸ ಸುವರ್ಣ ಕಾರ್ಕಳ, ಪಮ್ಮಿ ಕೊಡಿಯಾಲ್ ಬೈಲ್, ಕೆ.ಲಕ್ಷ್ಮೀ ಮೈಸೂರು ಮತ್ತು ಶಾಂತ ಕುಂಟಿನಿ ಪುತ್ತೂರು ಇವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.