ಬ್ಯಾಂಕ್ ವಿಲೀನಕ್ಕೆ ವಿರೋಧ: ಸೆ.26ರಂದು ದೊಂದಿ ಬೆಳಕಿನ ಮೆರವಣಿಗೆ
ಉಡುಪಿ, ಸೆ.25: ಕೇಂದ್ರ ಸರಕಾರ ನಡೆಸಿದ ರಾಷ್ಟ್ರೀಕೃತ ಬ್ಯಾಂಕುಗಳ ಏಕಪಕ್ಷೀಯ ವಿಲೀನವನ್ನು ವಿರೋಧಿಸಿ ಉಡುಪಿ ಜಿಲ್ಲಾ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯು (ಜೆಸಿಟಿಯು) ಎಐಟಿಯುಸಿ, ಸಿಐಟಿಯು ಹಾಗೂ ಉಡುಪಿ ಜಿಲ್ಲಾ ವಿವಿಧ ಬ್ಯಾಂಕ್ ಸಂಘಟನೆಗಳ ಸಹಯೋಗದೊಂದಿಗೆ ಸೆ.26ರ ಸಂಜೆ ಆರು ಗಂಟೆಗೆ ಉಡುಪಿಯಲ್ಲಿ ದೊಂದಿ ಬೆಳಕಿನ ಮೆರವಣಿಗೆಯನ್ನು ಹಮ್ಮಿಕೊಂಡಿದೆ.
ಈ ಮೆರವಣಿಗೆಯು ಉಡುಪಿಯ ಜೋಡುಕಟ್ಟೆಯಿಂದ ಪ್ರಾರಂಭಗೊಂಡು ಸಿಂಡಿಕೇಟ್ ಬ್ಯಾಂಕ್ ವಲಯ ಕಚೇರಿ, ಕೆಎಂ ಮಾರ್ಗ, ಮಹಾತ್ಮಗಾಂಧಿ ಪ್ರತಿಮೆ, ಸಿಟಿ ಬಸ್ ನಿಲ್ದಾಣದ ಮೂಲಕ ಕಾರ್ಪೊರೇಶನ್ ಬ್ಯಾಂಕ್ ವಲಯ ಕಚೇರಿ ಆವರಣದಲ್ಲಿ ಮುಕ್ತಾಯೊಳ್ಳಲಿದೆ.
ಈ ಪ್ರತಿಭಟನಾ ಮೆರವಣಿಗೆ ಹಾಗೂ ಸಭೆಯಲ್ಲಿ ಬ್ಯಾಂಕ್ ನೌಕರರು ಹಾಗೂ ಕಾರ್ಮಿಕ ಬಂದುಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕಾರ್ಮಿಕ ಸಂಘಗಳ ಜಂಟಿ ಸಮಿತಿ ಜಿಲ್ಲಾ ಸಂಚಾಲಕ ಶಂಕರ್ ಹಾಗೂ ಉಡುಪಿ ಜಿಲ್ಲಾ ಬ್ಯಾಂಕ್ ಸಂಘಟನೆಗಳ ಸಂಯುಕ್ತ ವೇದಿಕೆಯ ಸಂಚಾಲಕ ಹೆರಾಲ್ಡ್ ಡಿಸೋಜ ಪತ್ರಿಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.